*ಐಎಂಟೆಕ್ಸ್-23 ನಡೆಸಿದ ಏಷ್ಯಾದ ಅತಿದೊಡ್ಡ ಪ್ರದರ್ಶನದಲ್ಲಿ ಕೆಎಲ್‌ಎಸ್ ಜಿಐಟಿ ತಂಡಕ್ಕೆ ಪ್ರಶಸ್ತಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂಡಿಯನ್ ಮೆಷಿನ್ ಟೂಲ್ ಮೆನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಐಎಂಟಿಎಂಎ) ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅತಿ ದೊಡ್ಡ ಪ್ರದರ್ಶನದ 20 ನೇ ಆವೃತ್ತಿಯನ್ನು 2023 ರಜನವರಿ 19 ರಿಂದ 25 ರವರೆಗೆ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ ಆಯೋಜಿಸಿತ್ತು.
ಐಎಂಟೆಕ್ಸ್ 2023 ಟೂಲ್‌ಟೆಕ್ ಮತ್ತು ಡಿಜಿಟಲ್ ಮೆನುಫ್ಯಾಕ್ಚರಿಂಗ್ ವಿಭಾಗಗಳಲ್ಲಿ ಎರಡು ವರ್ಷಗಳ ನಂತರ ನಡೆಯುತ್ತಿರುವ ಈ ಪ್ರದರ್ಶನದಲ್ಲಿ 16 ದೇಶಗಳ 350 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು.
ಕೆಎಲ್ಎಸ್ ಜಿ.ಐ.ಟಿ ತಮ್ಮ ಸಂಶೋಧನಾ ಕಾರ್ಯವನ್ನು (ಇಂಡಸ್ಟ್ರಿ – ಇನ್‌ಸ್ಟಿಟ್ಯೂಟ್ ಪೆವಿಲಿಯನ್) ನಲ್ಲಿ ಪ್ರದರ್ಶಿಸಿತ್ತು ಮತ್ತು “ಉದ್ಯಮದಲ್ಲಿ ಅಲ್ಯೂಮಿನಿಯಂ ಮಿಶ್ರಲೋಹದ ಕನಿಷ್ಠ ಪ್ರಮಾಣದ ಲೂಬ್ರಿಕೇಶನ್ ಅಸಿಸ್ಟೆಡ್ಮಿಲ್ಲಿಂಗ್” ಎಂಬ ಅತ್ಯುತ್ತಮ ಸಂಶೋಧನಾ ಕಾರ್ಯಕ್ಕಾಗಿ ನಗದು ಬಹುಮಾನದೊಂದಿಗೆ 3 ನೇ ಸ್ಥಾನವನ್ನು ಪಡೆದುಕೊಂಡಿತು. ಡಾ.ಮಹಾಂತೇಶ ಎಂ.ನಡಕಟ್ಟಿ ಮತ್ತು ಡಾ.ರವಿರಾಜ್ ಎಂ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಡಾ.ಹರ್ಷಿತ್ ಬಿ.ಕುಲಕರ್ಣಿ ಅವರು ಸಂಶೋಧನಾ ಕಾರ್ಯವನ್ನು ನಡೆಸಿದ್ದರು.
ಕೆಎಲ್ಎಸ್ ಜಿ.ಐ.ಟಿಯು ಐಐಟಿ ಕಾನ್ಪುರ, ಐಐಟಿ ಮದ್ರಾಸ್ ಮುಂತಾದ ಪ್ರಮುಖ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಈ ಬಹುಮಾನವನ್ನು ಪಡೆದುಕೊಂಡಿದೆ.
ಪ್ರೊ.ಪ್ರಜ್ಞಾ ಎಚ್.ಕುಲಕರ್ಣಿ, ಪ್ರೊ.ಪ್ರಜಕ್ತಾ ಎಸ್.ಪಾಟೀಲ್, ಪ್ರೊ.ಆನಂದ ಎ.ಕುಲಕರ್ಣಿ, ಪ್ರೊ.ಮಹೇಶ ಸತ್ತಿಗೇರಿ, ಡಾ.ಸಚಿನ್ ಕುಲಕರ್ಣಿ ಮತ್ತು ಪ್ರೊ.ಮಹೇಶ ಕೋರಿ ಅವರು ಕೆಎಲ್‌ಎಸ್ ಜಿಐಟಿಯನ್ನು ಪ್ರತಿನಿಧಿಸಿದ್ದರು. ವಿದ್ಯಾರ್ಥಿಗಳಾದ ಅದಿತಿ ಜೋಶಿ, ಭಕ್ತಿ ಅಷ್ಟೇಕರ, ಮೂಸಾಶಾಪುರಿ, ನಿತೇಶ ಪಾಟೀಲ, ಪ್ರತೀಕ ತಿಗಡಿಮಠ, ರಾಕೇಶ ತೇರಣಿ ಭಾಗವಹಿಸಿದ್ದರು.
ಕೆಎಲ್‌ಎಸ್. ಜಿಐಟಿ ಆಡಳಿತಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ, ಪ್ರಾಂಶುಪಾಲ ಡಾ.ಜೆ.ಕೆ.ಕಿತ್ತೂರ, ತಂಡದ ಅಸಾಧಾರಣ ಸಾಧನೆಗಾಗಿ ಅಭಿನಂದಿಸಿದ್ದಾರೆ.
*ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 46 ಜನರ ದುರ್ಮರಣ*
https://pragati.taskdun.com/suicide-bomb-blastpeshawar-mosquepakistana46-people-killed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ