
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 194 ಸಹಾಯಕ ವ್ಯವಸ್ಥಾಪಕ, ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಕರೆಯಲಾಗಿದೆ.
10ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದವರಿಗೆ ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ ಹಾಗೂ ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ.
ಸಂಸ್ಥೆಯ ವಿವರಗಳು:
ಸಂಸ್ಥೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ (KMF SHIMUL )
ಒಟ್ಟು ಹುದ್ದೆಗಳು: 194
ಉದ್ಯೋಗ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ
ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು, ಜೂನಿಯರ್ ಟೆಕ್ನಿಷಿಯನ್
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ಪದವಿ, B.Sc, B.Com, BBA, BBM, BE/B.Tech, BVSc & AH, M.Sc, MBA ಇವುಗಳಲ್ಲಿ ಯಾವುದಾದರೂ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 35 ವರ್ಷ
ವಯಸ್ಸಿನ ಸಡಿಲಿಕೆ:
2A/2B/3A/3B ಅಭ್ಯರ್ಥಿಗಳು – 3 ವರ್ಷ
SC/ST/ಪ್ರವರ್ಗ-I ಅಭ್ಯರ್ಥಿಗಳು – 5 ವರ್ಷ
ಅರ್ಜಿ ಶುಲ್ಕ:
SC/ST/ಪ್ರವರ್ಗ-I/PWD – 500ರೂ.
ಇತರರು – 1000 ರೂ. ಇರುತ್ತದೆ.
ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ, ಅರ್ಹತಾ ಪಟ್ಟಿ (ಮೆರಿಟ್ ಲಿಸ್ಟ್) ಹಾಗೂ ಮೌಖಿಕ ಸಂದರ್ಶನಗಳ ಮೂಲಕ ನಡೆಯಲಿದೆ
ಅರ್ಜಿ ಸಲ್ಲಿಸುವ ಮುನ್ನ KMF SHIMUL ಅಧಿಕೃತ ಅಧಿಸೂಚನೆಯನ್ನು ಓದಿ, ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಆನ್ಲೈನಲ್ಲಿ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ.




