ಪ್ರಗತಿವಾಹಿನಿ ಸುದ್ದಿ; ಹಾಸನ: ಕೊರೊನಾ ಹೋಗಲು ಇನ್ನೂ ಹತ್ತು ವರ್ಷಗಳು ಬೇಕು. ಮತ್ತೊಂದು ಅಲೆಯಲ್ಲಿ ಗಂಡಾಂತರ ರೋಗ ಬರಲಿದೆ. ಹಾದಿ ಬೀದಿಗಳಲ್ಲಿ ಜನರು ಸಾವನ್ನಪ್ಪುತ್ತಾರೆ ಎಂದು ಕೋಡಿಮಠದ ಶ್ರೀಗಳು ಭಯಂಕ ಭವಿಷ್ಯ ನುಡಿದಿದ್ದಾರೆ.
ಹಾಸನದ ಅರಸಿಕೆರೆಯಲ್ಲಿ ಮಾತನಾಡಿದ ಶ್ರೀಗಳು, ಪ್ರೇತಗಳು ಕೂಡ ಮಾತನಾಡುವುದನ್ನು ಎಲ್ಲರೂ ನೊಡಲಿದ್ದೀರಿ. ದೊಡ್ಡ ದೊಡ್ಡ ತಲೆಗಳೆ ಉರುಳಲಿವೆ. ನಾಲ್ಕು ದಿಕ್ಕುಗಳಲ್ಲಿ ದೊಡ್ಡ ಅನಾಹುತಗಳು ಸಂಭವಿಸಲಿವೆ. ರಾಷ್ಟ್ರ ರಾಜಕೀಯ ವಿಫಲವಾಗಲಿದ್ದು, ರಾಜಕೀಯ ಭೀತಿ ಸೃಷ್ಟಿಯಗಾಲಿದೆ ಎಂದಿದ್ದಾರೆ.
ಅಶ್ವಯುಜ ಮಾಸದ ಬಳಿಕ ಜಗತ್ತಿನಲ್ಲಿ ಅಪಾಯಕರಿ ಘಟನೆ ಸಂಭವಿಸಲಿದೆ. ಭೂಕಂಪ, ಪ್ರಳಯದಂತ ಅನಾಹುತ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಇನ್ನು ಕೊರೊನಾ ಬಗ್ಗೆ ಮಾತನಾಡಿರುವ ಶ್ರೀಗಳು ಜೂನ್ 20ರ ಬಳಿಕ ಕೊರೊನಾ ಸ್ವಲ್ಪ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ