Karnataka NewsLatest

*ಊಹಿಸಲಾಗದ ದು:ಖ….ಭಾರಿ ಗಂಡಾಂತರ ಎಚ್ಚರಿಕೆ ನೀಡಿದ ಕೋಡಿಶ್ರೀ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಹಾಗೂ ದೇಶ ಈಗಾಗಲೇ ಸಾಕಷ್ಟು ನೋವು- ಸಂಕಷ್ಟಗಳನ್ನು ಎದುರುಸುತ್ತಿರುವ ಬೆನ್ನಲ್ಲೇ ಊಹೆಗೂ ನಿಲುಕದಂತಹ ದು:ಖ ಎದುರಾಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.

Related Articles

ಹಾಸನದಲ್ಲಿ ಮಾತನಾಡಿರುವ ಕೋಡಿಶ್ರೀಗಳು, ರಾಜ್ಯ ಹಾಗೂ ದೇಶಕ್ಕೆ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದಿದ್ದಾರೆ. ಮೇಘಸ್ಫೋಟ, ಜಲಪ್ರಳಯ, ವಾಯುವಿನಿಂದ ಆಪತ್ತು ಎದುರಾಗಲಿದೆ ಎಂದು ಈ ಮೊದಲೇ ಹೇಳಿದ್ದೆ. ವಿಮಾನ ಆಪತ್ತು ಸೇರಿದಂತೆ ಕೆಲ ಆಪತ್ತುಗಳು ಸಂಭವಿಸಲಿವೆ. ಮುಂದೆ ಇನ್ನೊಂದು ಬ್ಭಾರಿ ಮೇಘಸ್ಫೋಟ ಸಂಭವಿಸಲಿದೆ. ಊಹೆಗೂ ಮೀರಿದ ದು:ಖ ಎದುರಾಗಲಿದೆ ಎಂದು ಹೇಳಿದ್ದಾರೆ.

ಮನುಷ್ಯ ಓಡಾಡುತ್ತಲೆ ಸಾಯುತ್ತಾನೆ ಎಂದು ಹೇಳಿದ್ದೆ. ಇನ್ನಷ್ಟು ಅಸ್ಥಿರತೆ ಹೆಚ್ಚಾಗಲಿದೆ ಎಂದಿದ್ದಾರೆ. ”ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದ ಮಡಿಯೇ ಪುರವೆಲ್ಲ ಕೂಳಾದೀತು’ ಎಂದು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದ್ದಾರೆ. ಇದನ್ನು ಬರೆದಿಟ್ಟುಕೊಳ್ಳಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುತ್ತೇನೆ ಎಂದಿದ್ದಾರೆ. ಒಟ್ಟಾರೆ ಕೋಡಿಶ್ರೀ ಭವಿಷ್ಯದ ಪ್ರಕಾರ ರಾಜ್ಯಕ್ಕೆ, ದೇಶಕ್ಕೆ ಆಪತ್ತು ಕಾದಿದೆ ಎಂದು ಹೇಳಲಾಗಿದೆ.

Home add -Advt


Related Articles

Back to top button