LatestNational

*ಮೇಡೇ ಘೋಷಿಸಿದ ಪೈಲಟ್: ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ*

ಪ್ರಗತಿವಾಹಿನಿ ಸುದ್ದಿ: ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ‘ಮೇಡೇ’ ಎಂದು ಘೋಷಿಸ್ದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.

Home add -Advt

ಗುವಾಹಟಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡೀಗೋ ವಿಮಾನದಲ್ಲಿ ಏಕಾಎಕಿ ಇಂಧನ ಖಾಲಿಯಾದ ಪರಿಣಾಮ ಪೈಲಟ್ ಮೇಡೇ ಎಂದು ಘೋಷಿಸಿದ್ದಾರೆ. ತಕ್ಷಣ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್ ಆಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.

ಜೂನ್ 18ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 6E-6764 ಇಂಡಿಗೋ ವಿಮಾನ ಗುರುವಾರ ಸಂಜೆ 4:40 ಕ್ಕೆ ಗುವಾಹಟಿಯಿಂದ ಹೊರಟು ಸಂಜೆ 7:45ಕ್ಕೆ ಚೆನ್ನೈ ತಲುಪಬೇಕಾಗಿತ್ತು. ಆದರೆ ಬೆಂಗಳೂರು ಏರ್ ಪೋರ್ಟ್ ಗೆ 35 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿರುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ಸಂದೇಶ ರವಾನಿಸಿದ್ದಾರೆ. ಬಳಿಕ ವಿಮಾನ ಬೆಂಗಳೂರು ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.

Related Articles

Back to top button