*ರೋಗ ದಿನಗಳು ಹೆಚ್ಚಾಗುವ ಸಾಧ್ಯತೆ; ರಾಜ್ಯಕ್ಕೆ ಕಾದಿದೆಯೇ ಗಂಡಾಂತರ? ಕೋಡಿಶ್ರೀ ನುಡಿದ ಭವಿಷ್ಯವೇನು?*
ಪ್ರಗತಿವಾಹಿನಿ ಸುದ್ದಿ: ಜಗತ್ತಿನಲ್ಲಿ ರೋಗ ದಿನಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಪ ಆಯಸ್ಸು ಕಡಿಮೆಯಾಗುತ್ತಿದೆ. ಹೆಣ್ಣು, ಗಂಡು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಲಿದ್ದಾರೆ. ಬರುವ ದಿನಗಳು ಅಷ್ಟು ಶುಭವಿಲ್ಲ ಎಂದು ಕೋಡಿಮಠದ ಶ್ರೀ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದರು.
ಮಂಗಳವಾರ ರಾಮತೀರ್ಥನಗರದ ಭಕ್ತರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಸಹ ಇವೆ. ವಿಶೇಷವಾಗಿ ಕಪ್ಪು, ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ ಎಂದರು.
ಒಬ್ಬ ಸನ್ಯಾಸಿ ತಪ್ಪಸ್ಸಿಗೆ ಕುಳಿತಾಗ ಒಬ್ಬ ಬೇಡ ಜಿಂಕೆ ಭೇಟೆಯಾಡಲು ಬಂದಾಗ ಸನ್ಯಾಸಿ ಮುಂದೆ ಜಿಂಕೆ ಓಡಿ ಹೋಯಿತು. ಆಗ ಬೇಡ ಸನ್ಯಾಸಿಗೆ ಕೇಳುತ್ತಾನೆ. ಸ್ವಾಮಿ ಜಿಂಕೆ ಓಡಿ ಹೋಯಿತಾ ಎಂದು. ಜಿಂಕೆ ಹೋಯಿತು ಎಂದರೆ ಅದನ್ನು ಕೊಂದು ಬಿಡುತ್ತಾನೆ. ಆ ಪಾಪ ನನಗೆ ಬಂದು ಬಿಡುತ್ತದೆ. ಸುಳ್ಳು ಹೇಳಿದರೂ ಪಾಪ ಬರುತ್ತದೆ ಎಂದು ಕಣ್ಣು ನೋಡಿತು. ಕಣ್ಣು ಮಾತನಾಡಲ್ಲ. ನಾಲಿಗೆ ಮಾತನಾಡುತ್ತೆ. ಆದರೆ ನೋಡುವುದಿಲ್ಲ. ರಾಜಕಾರಣದ ಬಗ್ಗೆ ಹೇಳಬೇಕಾದರೆ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ. ಸಾವು, ನೋವು ಸಂಭವಿಸುತ್ತದೆ ಎಂದು ಹೇಳಿದ್ದೆ. ಅದು ಅಮವಾಸ್ಯೆಯವರೆಗೂ ಇರುತ್ತದೆ ಎಂದರು.
ಪ್ರಕೃತಿಯಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದೆ. ಅದು ಪ್ರಕೃತಿಯ ಧೋಷ. ಒಳ್ಳೆಯದಕ್ಕಿನ ಕೆಟ್ಟದ್ದೆ ಹೆಚ್ಚಾಗುತ್ತದೆ. ಅಮವಾಸ್ಯೆ ನಂತರ ಈ ಸಮಸ್ಯೆ ಮುಂದಿನ ಭಾಗದಲ್ಲಿ ಆಗುತ್ತದೆ. ಅನಿಷ್ಟ ಜಾಸ್ತಿ ಇರುತ್ತದೆ ಎಂದು ಭವಿಷ್ಯ ನುಡಿದರು.
ಅಳುಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಮೊದಲಿಗೆ ಅಪಪ್ರಚಾರ ಬಂದಿದೆ. ಇದು ಬರುವ ಹೊತ್ತಿಗೆ ಸತ್ಯ ಎನ್ನುವುದು ಮರೆ ಮಾಚಿರುತ್ತದೆ. ಎಲ್ಲಿಯವರೆಗೆ ಜನರಿಗೆ ನೈಜವಾದ ಜ್ಞಾನ, ಬುದ್ಧಿವಂತರು ಮಾಡಿದವರ ಪಾಪ ಆಡಿದವರ ಬಾಯಿಗೆ ನೀನು ಯಾಕೆ ಮಾತನಾಡುತ್ತೀಯಾ ಎನ್ನುತ್ತಾರೆ. ಅದು ಹಂಗಲ್ಲ. ಇದು ಬುದ್ಧಿವಂತರು ಮಾಡಿರುವ ಸ್ಲೋಗನ್. ಅವರು ಮಾಡಿದ ತಪ್ಪನ್ನು ಮುಚ್ಚಿ ಹಾಕಲು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಲ್ಲ. ಮಾಡದ ಅವರ ಪಾಪ ಆಡಿದವರ ಬಾಯಲ್ಲಿ. ನಾನು ತಪ್ಪು ಮಾಡದೆ ಹೇಳುವುದು ಅಪಪ್ರಚಾರ. ಅದು ಪಾಪ ಬರುತ್ತದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ