Sports

*ಪ್ಯಾರಿಸ್ ಒಲಂಪಿಕ್ಸ್: ಎರಡನೇ ಪದಕ ಗೆದ್ದ ಭಾರತ*

ಪ್ರಗತಿವಾಹಿನಿ ಸುದ್ದಿ: ಪ್ಯಾರಿಸ್ ಒಲಂಪಿಕ್ಸ್-2024ರಲ್ಲಿ ಭಾರತ ಎರಡನೇ ಕಂಚಿನ ಪದಕ ಗೆದ್ದಿದೆ. 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮೊದಲ ಕಂಚಿನ ಪದಕ ಗೆದ್ದು ಕೊಟ್ಟಿದ್ದ ಮನು ಭಾಕರ್ ಇದೀಗ ಮತ್ತೊಂದು ಪದಕ ಗೆದ್ದಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಮಿತ್ರ ಸ್ಪರ್ಧೆಯಲ್ಲಿ ಭಾರತದ ಮನುಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಕಂಚಿನ ಪದಕ ಗೆದ್ದಿದೆ. ಈ ಮೂಲಕ ಪ್ಯಾರಿಸ್ ಓಲಂಪಿಕ್ಸ್ ನಲ್ಲಿ ಭಾರತ ಈವರೆಗೆ ಎರಡು ಕಂಚಿನ ಪದಕ ಗೆದ್ದಂತಾಗಿದೆ.

Home add -Advt

ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಹಾಗೂ ಲೀ ವೊನ್ಹೋ ಅವರನ್ನು 16-10 ಅಂತರದಿಂದ ಸೋಲಿಸಿದ ಭಾರತದ ಕ್ರೀಡಾಪಟುಗಳು ಕಂಚಿನ ಪದಕ ಗೆದ್ದಿದ್ದಾರೆ.


Related Articles

Back to top button