Latest

ಅಕ್ರಮ ಸಂಬಂಧ: ನಡುರಸ್ತೆಯಲ್ಲೇ ಹೆಣವಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಅಕ್ರಮ ಸಂಬಂಧದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಮುಳಬಾಗಿಲು ನಗರದ ಪಳ್ಳಿಗರ ಪಾಳ್ಯದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ನಾಗರಾಜ್ (35) ಕೊಲೆಯಾದ ವ್ಯಕ್ತಿ. ಅದೇ ಪ್ರದೇಶದ ಆರೋಪಿ ಅಪ್ಪಿ ಎಂಬಾತ ಕೊಲೆ ಮಾಡಿದ ಆರೋಪಿ.

ಆರೋಪಿ ಅಪ್ಪಿ ಪತ್ನಿ ಜೊತೆಗೆ ಮೃತ ನಾಗರಾಜ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬದಿದ್ದು, ತಡ ರಾತ್ರಿ ಇಸ್ಪೀಟ್ ಆಡುವಾಗ ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ಅಪ್ಪಿ ರಸ್ತೆಯಲ್ಲೇ ನಾಗರಾಜ್‍ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಮಾಹಿತಿ ತಿಳಿದ ಮುಳಬಾಗಿಲು ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button