Kannada News

ಕೋಳಿಕೊಪ್ಪ ಶಾಲೆ ನೆಲಸಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಭಾರಿ ಮಳೆಯಿಂದಾಗಿ ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಶಾಲೆ ನೆಲಸಮವಾಗಿದೆ.

ಶಾಲೆಗೆ ರಜೆ ಇದ್ದುದರಿಂದ ಜೀವಾಪಾಯವಾಗಿಲ್ಲ. ಇಲ್ಲವಾದಲ್ಲಿ ಮಕ್ಕಳ ಜೀವಕ್ಕೆ ಅಪಾಯವಿತ್ತು.

Home add -Advt

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುನ್ನೆಚ್ಚರಿಕೆ ಅಗತ್ಯ-

ಕಳೆ 8-10 ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಲೆಗಳು ಅಪಾಯಕಾರಿ ಸ್ಥಿತಿಯಲ್ಲಿರುತ್ತವೆ.

ಗೋಡೆಗಳೆಲ್ಲ ನೆನೆದು ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಶಾಲೆ ಆರಂಭಕ್ಕೆ ಮುನ್ನ ಕಟ್ಟಡಗಳನ್ನು ತಜ್ಞರಿಂದ ಪರಿಶೆಲನೆ ನಡೆಸಬೇಕು.

ಇಲ್ಲವಾದರೆ ಮಕ್ಕಳ ಜೀವಕ್ಕೆ ಅಪಾಯವಾಗಬಹುದು.

Related Articles

Back to top button