
ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ – ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರ ಕೆರೆಯಲ್ಲಿ ಭಾನುವಾರ ರಾತ್ರಿ ಅಕ್ರಮ ಮರಳು ದಂಧೆ ಅಡ್ಡೆ ಮೇಲೆ ಕೂಡ್ಲಿಗಿ ಪೊಲೀಸರು ದಾಳಿ ನಡೆಸಿದ್ದಾರೆ.
ಮರಳು ತುಂಬಿದ ಟ್ರಾಕ್ಟರ್ ಜಪ್ತಿಮಾಡಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪ್ರತ್ಯಕ್ಷದಶಿ೯ಗಳು ತಿಳಿಸಿದ್ದಾರೆ. ಬಹುದಿನಗಳಿಂದ ನಾಣ್ಯಾಪುರ ಗ್ರಾಮದ ಕೆರೆಯಲ್ಲಿ ನಿರಂತರ ಅಕ್ರಮ ಮರಳು ಸಾಗಾಣಿಕೆ ಜರುಗುತ್ತಿದ್ದು ಈ ಸಂಬಂಧ ಕೂಡ್ಲಿಗಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗದ ಕಾರಣ ಅನಿವಾಯ೯ವಾಗಿ ಮಾಧ್ಯಮಗಳ ನೆರವು ಪಡೆಯಲಾಗಿತ್ತು.
ಪತ್ರಿಕೆಗಳಲ್ಲಿ ವರದಿ ಪ್ರಸಾರವಾದಾಗಿನಿಂದ ಕೂಡ್ಲಿಗಿ ಪೊಲೀಸರು ದಂಧೆಕೋರರ ಮೇಲೆ ತೀವ್ರ ನಿಗಾವಹಿಸಿದ್ದರು. ಇಂದು ಪೊಲೀಸರು ಸಮಯೋಚಿತ ದಾಳಿಮಾಡೋ ಮೂಲಕ ಅಕ್ರಮಕೋರರಿಗೆ ಕಡಿವಾಣ ಹಾಕಿದ್ದಾರೆ. ಕೂಡ್ಲಿಗಿ ಪೊಲೀಸರ ಕತ೯ವ್ಯ ನಿಷ್ಠೆಗೆ ನಾಣ್ಯಾಪುರದ ಯುವಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕ ನಿಧಾ೯ಕ್ಷಿಣ್ಯ ಕ್ರಮದ ಮೂಲಕ ಪೊಲೀಸರು ಅಕ್ರಮ ಮರಳು ದಂಧೆಕೋರರಿಗೆ ಎಚ್ಚರಿಕೆಯ ಸಂದೇಶ ನೀಡಬೇಕಾಗಿದೆ ಎಂದು ನಾಣ್ಯಾಪುರ ಗ್ರಾಮದ ಯುವಕರು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ