
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ : ಬೆತ್ತಲೆ ಪೂಜೆ ಮಾಡಿದರೆ ಸಾಲ ತೀರುತ್ತದೆ ಎಂದು ಪುಸಲಾಯಿಸಿ 16 ವರ್ಷದ ಬಾಲಕನಿದ ಬೆತ್ತಲೆ ಪೂಜೆ ಮಾಡಿಸಿ ವಿಕೃತಿ ಮೆರೆದ ದುರುಳರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ 16 ವರ್ಷದ ಬಾಲಕ ತನ್ನ ತಂದೆಯ ಸಾಲ ತೀರಿಸಲು ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿದ್ದಾನೆ. ಬಾಲಕನ ಪರಿಚಯಸ್ಥರೇ ಆಗಿರುವ ಶರಣಪ್ಪ, ಮರಿಗೌಡ, ಶರಣಪ್ಪ ತಳವರ್ ಎಂಬುವವರು ಬಾಲಕನನ್ನು ನಂಬಿಸಿ ಸಾಲ ತೀರಿಸಬೇಕೆಂದರೆ ಬೆತ್ತಲೆ ಪೂಜೆ ಮಾಡಬೇಕು. ಕೈತುಂಬಾ ಹಣ ಸಂಪಾದಿಸಬಹುದು ಎಂದು ಹೇಳಿ ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಿ ವಿಡಿಯೋ ಮಾಡಿದ್ದಾರೆ.
ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಕಂಡ ಹಾಸಗಲ್ ಗ್ರಾಮಸ್ಥರು ಶಾಕ್ ಆಗಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನೊಂದ ಬಾಲಕ ಹಾಗೂ ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕನ ತಂದೆ ಮನೆ ಕಟ್ಟಲು ಸಾಲ ಮಾಡಿದ್ದರು. ಸಾಲ ತೀರಿಸಲು ತಂದೆಯ ಸಹಾಯಕ್ಕೆಂದು ಬಾಲಕ ಹುಬ್ಬಳ್ಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ. ಈ ವೇಳೆ ಬಾಲಕನಿಗೆ ಮೂವರು ಕಿರಾತಕರ ಪರಿಚಯವಾಗಿದ್ದು, ಅಮಾಯಕ ಬಾಲಕನನ್ನು ನಂಬಿಸಿ ರೂಮ್ ಗೆ ಕರೆದೊಯ್ದು ಬೆತ್ತಲೆ ಪೂಜೆ ಮಾಡಿಸಿ ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.
6 ರಾಜ್ಯಗಳ ವಿಧಾನಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್
https://pragati.taskdun.com/politics/6-stateby-electiondate-announce/