Kannada NewsKarnataka News

ರಾಷ್ಟ್ರೀಯ ಸಾಧಕರಿಗೆ ಡಾ.ಕೋರೆ ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಜುಲೈ ೭ ಮತ್ತು ೮ ರಂದು ನವದೆಹಲಿಯಲ್ಲಿ ಜರುಗಿದ ಪುರುಷರ ಹಾಗೂ ಮಹಿಳೆಯರ ಕಾಮನ್‌ವೆಲ್ತ್ ಜುಡೋ ಚಾಂಪಿಯನ್‌ಶಿಫ್ ಹಾಗೂ ಏಶಿಯನ್ ಜುಡೋ ಚಾಂಪಿಯನ್‌ಶಿಫ್ ಪಂದ್ಯಾವಳಿಯಲ್ಲಿ ಪಡೆದು ಬೆಳಗಾವಿಯ ಬಾಲಕಿಯರಿಬ್ಬರು ಸಾಧನೆಯನ್ನು ಗೈದಿದ್ದಾರೆ.

ಮಲಪ್ರಭಾ ಜಾಧವ ೪೪ ಕೆಜಿಯಲ್ಲಿ ಬೆಳ್ಳಿಯ ಪದಕವನ್ನು ಹಾಗೂ ವಸುಂಧರಾ ೬೩ ಕೆಜಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಸೆಪ್ಟೆಂಬರ್ ೨೫ರಿಂದ ೨೯ ರವರೆಗೆ ಲಂಡನ್‌ನಲ್ಲಿ ಹಾಗೂ ೧ ಅಗಸ್ಟ್ ೨೦೧೯ ರಿಂದ ೫ ಅಗಸ್ಟ್ ೨೦೧೯ರವರೆಗೆ ಚೀನಾ ತೈಪೆಯಲ್ಲಿ ಜರುಗಲಿರುವ ಜುಡೋ ಪಂದ್ಯವಳಿಗಳಿಗೆ ಈ ಇಬ್ಬರೂ ಆಯ್ಕೆಯಾಗಿದ್ದಾರೆ.

ಇವರಿಬ್ಬರನ್ನೂ ಕೆಎಲ್‌ಇ ಸಂಸ್ಥೆ ದತ್ತು ಪಡೆದಿದ್ದು, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ  ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ  ಗೌರವಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತರಬೇತುದಾರರಾದ ರವಿ ಎಂ., ಸಂಜಯ ನಾಯಕ, ದೈಹಿಕ ನಿರ್ದೇಶಕರಾದ ಸಿ.ರಾಮರಾವ್, ಬಸವರಾಜ ಭೂಸಣ್ಣನವರ ಅವರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button