ಪ್ರಗತಿವಾಹಿನಿ ಸುದ್ದಿ, ಶ್ರೀನಗರ: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಐತಿಹಾಸಿಕ ಭಾರತ ಜೋಡೋ ಯಾತ್ರೆ ಇಂದು ಸಮಾರೋಪಗೊಳ್ಳುತ್ತಿರುವ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯ ಹಿಮದ ಸೌಂದರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಫಿದಾ ಆಗಿದ್ದಾರೆ.
ಕಾಶ್ಮೀರದಲ್ಲಿ ಪ್ರಸ್ತುತ ಸುರಿಯುತ್ತಿರುವ ಹಿಮದ ಸೌಂದರ್ಯ ಕಂಡು ಮನಸೋತಿರುವ ಕನಕಪುರ ಬಂಡೆ,
ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದೇವೆ. ರಾತ್ರಿ ಇಲ್ಲಿನ ಹವಾಮಾನ 9 ಡಿಗ್ರಿ ಸೆಲ್ಸಿಯಸ್ ಇತ್ತು. ಇಂದು ಬೆಳಗ್ಗೆ ಕೊಠಡಿಯಿಂದ ಹೊರಗೆ ಬಂದು ನೋಡಿದಾಗ ನನ್ನ ಜೀವನದಲ್ಲಿ ಇದೇ ಮೊದಲ ಬಾರಿ ಕಂಡ ಹಿಮಪಾತ ಹಾಗೂ ಅದರ ಸೌಂದರ್ಯ ಮನಸೂರೆಗೊಂಡಿದೆ. ನಾನು ಸ್ವಿಡ್ಜರ್ ಲ್ಯಾಂಡ್ ಸೇರಿದಂತೆ ಅಂಥ ಹಲವು ದೇಶಗಳನ್ನು ಸುತ್ತಿದ್ದೇನೆ. ಆದರೆ ಇಂದು ನನಗೆ ಆಗಿರುವ ಪ್ರಕೃತಿ ಸೌಂದರ್ಯದ ಅನುಭವ ಹಿಂದೆಂದೂ ಆಗಿರಲಿಲ್ಲ. ಇದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ,” ಎಂದು ಉದ್ಗರಿಸಿದ್ದಾರೆ.
“ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆಊಟ ಮುಗಿಸಿ ನಮ್ಮ ಕೋಣೆಗೆ ಬಂದು ಮಲಗುವಷ್ಟರಲ್ಲಿ ರಾತ್ರಿ 1 ಗಂಟೆ ಆಗಿತ್ತು. ಧಾರಾಕಾರ ಮಳೆಯಂತೆ ಹಿಮ ಸುರಿಯುತ್ತಿದೆ ಎಂದು ಅವರುಹೇಳಿದ್ದಾರೆ.
ಐದು ತಿಂಗಳಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ. ಕ್ರಮಿಸಿರುವ ಈ ಯಾತ್ರೆ ಸೋಮವಾರ ಸಮಾರೋಪಗೊಳ್ಳುತ್ತಿದ್ದು ಡಿಕೆಶಿ ಸೇರಿದಂತೆ ರಾಜ್ಯದ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
*ಸಿದ್ದರಾಮಯ್ಯನವರ ಶ್ರೀನಗರ ಪ್ರವಾಸ ದಿಢೀರ್ ರದ್ದು*
https://pragati.taskdun.com/siddaramaiahshreenagara-visitcancelledbharat-jodo-yatre/
*ಭೀಕರ ಅಪಘಾತ; ತಂದೆ-ಮಗಳು ಸ್ಥಳದಲ್ಲೇ ದುರ್ಮರಣ*
https://pragati.taskdun.com/busbike-accidentfatherdaughter-death/
*ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ; ತೀವ್ರ ಕುತೂಹಲ ಮೂಡಿಸಿದ ಸುದ್ದಿಗೋಷ್ಠಿ*
https://pragati.taskdun.com/ramesh-jarakiholid-k-shivakumaraudiobelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ