
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಕೀಯ ತಂತ್ರಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಬಿಜೆಪಿ ಹೈಕಮಾಂಡ್ ಮುಂದೆ ಎಲ್ಲವನ್ನೂ ಹೇಳಲಾಗಿದೆ. ಅವರ ನಿರ್ಧಾರದ ಬಗ್ಗೆ ಮಾತನಾಡಲು ಆಗಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ರಮೇಶ್ ರಾಜರಕಿಹೊಳಿ ವರಿಷ್ಠರಿಗೆ ಎಲ್ಲಾ ವಿಚಾರ ತಿಳಿಸಿದ್ದಾರೆ. ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು, ಅವರ ರಾಜಕೀಯ ನಿರ್ಧಾರದ ಬಗ್ಗೆ ನಾವೇನೂ ಮಾತನಾಡಲು ಆಗಲ್ಲ ಎಂದರು.
ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಿಕ್ಕಿಹಾಕಿಕೊಂಡಿದ್ದೇ ದುರದೃಷ್ಟಕರ. ಅವರೇ ಸಿಲುಕಿದ್ರೋ, ಬೇರೆಯವರು ಸಿಲುಕಿಸಿದ್ರೋ ಗೊತ್ತಿಲ್ಲ ಎಂದು ಹೇಳಿದರು.
ವಿಶೇಷ ಅಧಿವೇಶನ ಕರೆಯುವಂತೆ ಕುಮಾರಸ್ವಾಮಿ ಪತ್ರ