Kannada NewsKarnataka NewsLatest

ಮಾಜಿ ಶಾಸಕ ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪರಿಶ್ರಮ, ಕಾಂಗ್ರೆಸ್ ಗೆ ಫಲ ನೀಡಿದೆ : ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಬಹುಮತ ದಿಂದ ಗೆಲುವಾಗಿರುವುದು ಸಂತಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ.
 ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಅವರು, ಚನ್ನರಾಜ್ ಹಟ್ಟಿಹೊಳಿ ಗೆಲುವಿಗೆ ಸತೀಶ ಜಾರಕಿಹೊಳಿ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಇವರ ಸತತ ಪ್ರಯತ್ನವೇ ಇಂದು ಫಲ ನೀಡಿದೆ ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದರು.
ಎನ್.ಎಚ್. ಕೋನರೆಡ್ಡಿ ಅವರು ಕೈ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ, ಅವರಿಗೆ ಶಕ್ತಿ ಬಂದತಾಗಿದೆ. ಅವರಿಗಿದು ದೊಡ್ಡ ಭಾಗ್ಯ. ನಾವೇನು ಕಾಂಗ್ರೆಸ್ ಅಪರೇಷನ್ ಮಾಡುತ್ತಿಲ್ಲ. ಪಕ್ಷಕ್ಕೆ ಬರುವವರನ್ನು ಆತ್ಮೀಯವಾಗಿ ಸೇರ್ಪಡೆ ಮಾಡಿಕೊಳ್ಳಲಾಗುವುದು.  ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪಕ್ಷ ಸಂಘಟನೆ ಬಲಪಡಿಸುತ್ತಿದ್ದೆವೆ.  ವಿರೋಧ ಪಕ್ಷದಲ್ಲಿಕೊಂಡು ಬಹುಮತ ಅಂತರದಿಂದ ಗೆಲುವು ಸಾಧಿಸಲು ಸಂತಸ ತಂದಿದೆ ಎಂದರು.
ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಮಹದಾಯಿ ಹಾಗೂ ರೈತ ಹಿತರಕ್ಷಣೆಗಾಗಿ ನಾಡಿನಾದ್ಯಂತ ಅನೇಕ ಹೋರಾಟ ಮಾಡಿದ ಏಕೈಕ ನಾಯಕ,  ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವು ಹೆಮ್ಮೆಯ ಸಂಗತಿ ಎಂದರು.
ಉತ್ತರ ಕರ್ನಾಟಕ ರೈತರ ಕೂಗಿಗೆ ಧ್ವನಿಯಾಗಿ ನಿಂತ ಪ್ರತಿಷ್ಠೆಯ ನಾಯಕ ಇವರು, ಪ್ರಾಮಾಣಿಕತೆ , ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಕೈ ಜೋಡಿಸಲು ಕೊನರೆಡ್ಡಿ ಸಜ್ಜಾಗಿದ್ದಾರೆ. ಹೀಗಾಗಿ ಅವರಿಗೆ ಹೃದಯದಿಂದ ಸ್ವಾಗತಿಸಲಾಗುತ್ತಿದೆ ಎಂದರು.
ಹೋರಾಟದಲ್ಲಿ ಸಕ್ರಿಯವಾಗಿದ್ದು, ನವಲಗುಂದ ಹಾಗೂ ಧಾರವಾಡ ಅಭಿವೃದ್ಧಿಗೆ ಶ್ರಮಿಸಿದ  ಏಕೈಕ ನಾಯಕ ಕೋನರೆಡ್ಡಿ ಅವರು ಕಾಂಗ್ರೆಸ್ ಒಳ್ಳೆಯದಾಗಲಿದೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ,  ಹೋರಾಟಗಾರ ಕೋನರೆಡ್ಡಿ ಅವರು ನನಗೆ ತುಂಬಾ ಆತ್ಮೀಯ ಗೆಳೆಯರು, ಜೆಡಿಎಸ್ ನಲ್ಲಿದ್ದರು. ತಮ್ಮ ಬಗ್ಗೆ ಅಪಾರ ಅಭಿಮಾನ ಇಟ್ಟಿರುವ ನಾಯಕ‌, ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಮತ್ತಷ್ಟು ಬಲವಂತದಾಗಿದೆ ಎಂದರು.
ಜೆಡಿಎಸ್ ಯಾವುದೇ ಸಿದ್ದಾಂತ,  ಕಾರ್ಯಕ್ರಮ ಇಲ್ಲ. ಜೆಡಿಎಸ್ ಬಲ ಕುಗ್ಗುತ್ತಿದೆ. ಕೋನರೆಡ್ಡಿ ಜೆಡಿಎಸ್ ತೊರೆಯುವ
ತಿರ್ಮಾನ ಮಾಡಿದ್ದೂ ಒಳ್ಳೆಯದ್ದು, ಕಾಂಗ್ರೆಸ್ ನಲ್ಲಿ ಅವರ ಭವಿಷ್ಯ ಉಜ್ವಲಗೊಳ್ಳಲಿದೆ‌.  ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ  ತಿವಿದರು.
ಉ.ಕ ಸಮಸ್ಯೆಗೆ ಧ್ವನಿಯಾಗಿ ಅನೇಕ ಹೋರಾಟ ಮಾಡಿದ ಪ್ರಾಮಾಣಿಕ ನಾಯಕ.  ಧಾರವಾಡದ  ಶಕ್ತಿ ಇವರು,  ರಾಜಕೀಯ ಜೀವನದಲ್ಲಿ ಹೊಸ ತಿರುವು ಎಂದರು ಎಂದರು.
ಹಿಂದಿನ ಭಾಗಲಿನಿಂದ ಬಂದ ಬಿಜೆಪಿ ಕೋಮುಮಾದಿ ಪಕ್ಷವನ್ನು ರಾಜ್ಯದಲ್ಲಿ ಕಿತ್ತೆಸೆಯಬೇಕು. ಬಿಜೆಪಿ ಅಧಿಕಾರಕ್ಕೆ ಬಂದ್ ಮೇಲೆ ರಾಜ್ಯ ಜನತೆಗೆ ಸಂಕಷ್ಟ ಶುರುವಾಗಿದೆ. ಕೋಮುವಾದಿ ಪಕ್ಷವನ್ನು ಕಿತ್ತೆಸೆದಾಗ ರಾಜ್ಯದ ಜನರು ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದರು.
ಎಚ್ ಕೆ ಪಾಟೀಲ್, ಬಿ ಕೆ ಹರಿಪ್ರಸಾದ್, ಮಾಜಿ ಸಭಾಪತಿ ರಮೇಶಕುಮಾರ್,  ಮಾಜಿ ಉಪಮುಖಮಂತ್ರಿ ಪರಮೇಶ್ವರ, ನಾಸೀರ್ ಹುಸೇನ್,  ವಿನಯ ನಾವಲಗಟ್ಟಿ ಮೊದಲಾದವರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button