Kannada NewsKarnataka NewsLatest

*ಕೆಪಿಎಸ್‌ಸಿ ಹಗರಣ*: *ಕಿಂಗ್ ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಬಸವರಾಜ್ ಕನ್ನಾಳೆ ಕೆಪಿಎಸ್ ಸಿ ಹಗರಣದ ಪ್ರಮುಖ ಆರೋಪಿಯಾಗಿದ್ದು, ಸದ್ಯ ಸಿಐಡಿ ಅಧಿಕಾರಿಗಳ್ ಕಸ್ಟಡಿಯಲ್ಲಿದ್ದಾನೆ. ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಕನ್ನಾಳೆಗೆ ಐದು ದಿನಗಳ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಬಸವರಾಜ್ ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಕನ್ನಾಳೆ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. 12 ದಿನದ ಮಗುವಿಗೆ ನಾಮಕರಣ ಶಾಸ್ತ್ರ ಮಾಡುವ ಅಗತ್ಯವಿದೆ. ಹೀಗಾಗಿ ಮಾನವೀಯತೆ ಮೇಲೆ ಒಂದು ವಾರದ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಇತ್ತ ಸರ್ಕಾರದ ಪರ ಎಸ್‌ಪಿಪಿ ಬಿ.ಎನ್.ಜಗದೀಶ್ ಪ್ರತಿವಾದ ಮಂಡಿಸಿದ್ದು, ಕನ್ನಾಳೆ ಹಲವು ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದಾನೆ. ಸಿಐಡಿ ಕಸ್ಟಡಿಯಲ್ಲಿಯೇ ಬೀದರ್‌ಗೆ ತೆರಳಲು ಷರತ್ತು ವಿಧಿಸಬೇಕು ಎಂದಿದ್ದರು.

ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ಕನ್ನಾಳೆಗೆ ಅ.15ರಿಂದ ಅ.20ರವರೆಗೆ ಷರತ್ತಿನ ಅನ್ವಯ ಮಧ್ಯಂತರ ಜಾಮೀನು ನೀಡಿದ್ದು, ಪೊಲೀಸರೇ ಎಸ್ಕಾರ್ಟ್‌ನಲ್ಲಿ ಕರೆದೊಯ್ದು ಕರೆತರಲು ಸೂಚನೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button