Latest

ಕೆಪಿಎಸ್‍ಸಿ ಪರೀಕ್ಷೆ: ಮಾರ್ಗಸೂಚಿ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಎಸ್‍ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಗದಿಯಂತೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟನೆ ನೀಡಿದೆ.

ಈ ಹಿನ್ನಲೆಯಲ್ಲಿ ಕೆಪಿಎಸ್‍ಸಿ ಪರೀಕ್ಷೆ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಬಹುತೇಕ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ, ಸಿಇಟಿ ಮಾರ್ಗಸೂಚಿಗಳನ್ನೆ ಕೆಪಿಎಸ್‍ಸಿ ಪರೀಕ್ಷೆಗೂ ಮುಂದುವರಿಕೆ ಮಾಡಿದೆ.

* ಪರೀಕ್ಷೆಗೆ 3 ದಿನ ಮುಂಚೆ ಕಡ್ಡಾಯವಾಗಿ ಕೊಠಡಿ ಸ್ಯಾನಿಟೈಸ್ ಮಾಡಬೇಕು
* ಪ್ರತಿ ವಿದ್ಯಾರ್ಥಿಗಳು ಎರಡು ಗಂಟೆ ಮುಂಚೆ ಬಂದು ಪರೀಕ್ಷಾ ಕೇಂದ್ರದಲ್ಲಿ ನಿಗದಿತ ಕೊಠಡಿಯಲ್ಲಿ ಆಸೀನರಾಗಬೇಕು
* ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ
* ಪರೀಕ್ಷೆಗೆ ಆಗಮಿಸೋವಾಗ, ಪರೀಕ್ಷೆ ಮುಗಿಸಿ ತೆರಳುವಾಗ ಸಾಮಾಜಿಕ ಅಂತರ ಕಡ್ಡಾಯ
* ಪ್ರತಿ ಕೊಠಡಿಗೆ 24 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
* ಕೊಠಡಿಯಲ್ಲಿ ಅಭ್ಯರ್ಥಿಗಳ ಮಧ್ಯೆ ಸಾಮಾಜಿಕ ಅಂತರ ನಿಯಮ ಫಾಲೋ ಮಾಡಬೇಕು (ಕನಿಷ್ಠ 3 ಅಡಿ)
* ಕಂಟೈನ್ಮೆಂಟ್ ವಲಯದಿಂದ ಬರೋ ಅಭ್ಯರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಬೇಕು
* ಪರೀಕ್ಷಾ ಕೆಲಸಕ್ಕೆ ಹಾಜರಾಗೋ ಸಿಬ್ಬಂದಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಬಾರದು
* ಅನ್ಯ ಕಾಯಿಲೆ ಇರೋ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಬೇಕು
* ಪರೀಕ್ಷೆ ಮುಗಿದ ಬಳಿಕ ಕೊಠಡಿ, ಡೆಸ್ಕ್, ಟೇಬಲ್ ಗಳನ್ನ ಸ್ಯಾನಿಟೈಸ್ ಮಾಡಬೇಕು
* ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
* ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು
* ಪರೀಕ್ಷಾ ಕೇಂದ್ರದ ಶೌಚಾಯಲ ಶುಚಿತ್ವದಿಂದ ಇರುವಂತೆ ನೋಡಿಕೊಳ್ಳಬೇಕು
* ಕೊರೊನಾ ಸೋಂಕು ಇರೋ ಅಭ್ಯರ್ಥಿಗಳಿಗೆ ವಿಶೇಷ ಸ್ಥಳ, ವಿಶೇಷ ಕೊಠಡಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button