
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಗೋಕಾಕ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರಿಂದಾಗಿ ಬಂಧಿತರ ಸಂಖ್ಯೆ 48ಕ್ಕೆ ಏರಿದೆ.
ಅಣ್ಣಪ್ಪ ಕೆಂಪಣ್ಣ ಮಾರವಾಡಿ (ವಯಸ್ಸು: 31 ವರ್ಷ ಸಾ: ಜನತಾ ಪ್ಲಾಟ್ ದಳವಾಯಿ ನಗರ ಮಲ್ಲಾಪುರ ಪಿ.ಜಿ. ತಾ: ಗೋಕಾಕ), ಜಾನರಾಬರ್ಟ್ ಯಶವಂತ ಬಂಗೆನ್ನವರ (ವಯಸ್ಸು:26 ವರ್ಷ ಸಾ: ಶಿವಾಪೂರ ತಾ: ಗೋಕಾಕ), ಚಿದಾನಂದ ಚಿನ್ನಪ್ಪ ಮಾಡಲಗಿ (ವಯಸ್ಸು: 27 ವರ್ಷ ಸಾ: ರಾಜಾಪೂರ ತಾ: ಮೂಡಲಗಿ) ಬಂಧಿತರು.
ಇವರೆಲ್ಲರೂ ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದರು ಎದು ಪೊಲೀಸರು ತಿಳಿಸಿದ್ದಾರೆ.
ಪರೀಕ್ಷೆಗೆ ಬಳಸಿದ್ದ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ಇವರು ನಾಶಪಡಿಸಿದ್ದು, ಪರೀಕ್ಷೆಗೆ ಹಾಜರಾದ ಬಗ್ಗೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಎಲ್ಲ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
*ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಯುವತಿಯರೂ ಸೇರಿ ನಾಲ್ವರ ಬಂಧನ*
https://pragati.taskdun.com/kptcl-exam-scandle-4-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ