Kannada NewsLatest

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ 6 ಆರೋಪಿಗಳ ಬಂಧನ

 

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮತ್ತೆ 6 ಆರೋಪಿಗಳನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ.

ಈವರೆಗೆ ಪ್ರಕರಣದಲ್ಲಿ ಬಂಧಿತಾರದ ಆರೋಪಿಗಳ ಸಂಖ್ಯೆ 29ಕ್ಕೆ ಏರಿದೆ.

Home add -Advt

ಗೋಕಾಕ ತಾಲೂಕಿನ ಬಗರನಾಳದ ಈರಣ್ಣ ಮಲ್ಲಪ್ಪ ಬಂಕಾಪುರ (26), ಶಿವಾನಂದ ರಾಮಪ್ಪ ಕಾಮೋಜಿ (22), ರಾಮದುರ್ಗ ತಾಲೂಕಿನ ಬಟಕುರ್ಕಿಯ ಆದಿಲ್‌ಶಾ ಸಿಕಂದರ ತಾಸೇವಾಲೆ (23), ಮೂಡಲಗಿ ತಾಲೂಕಿನ ಖಾನಟ್ಟಿಯ ಮಹಾಂತೇಶ ಹಣಮಂತ ಹೊಸುಪ್ಪಾರ (22), ನಾಗನೂರಿನ ಮಹಾಲಿಂಗಪ್ಪ ಭೀಮಪ್ಪ ಕುರಿ (30) ಹಾಗೂ ಸವದತ್ತಿ ತಾಲೂಕಿನ ಸುಂದರ ಶಿವಾನಂದ ಬಾಳಿಕಾಯಿ (23) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇವರೆಲ್ಲರೂ ಪ್ರಸಕ್ತ ವರ್ಷ ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಗೆ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು. ಎಲ್ಲ ಆರೋಪಿಗಳಿಂದ ಎಲೆಕ್ಟ್ರಾನಿಕ್ಸ್ ಡಿವೈಸ್, ಮೊಬೈಲ್‌ಗಳು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button