Kannada NewsKarnataka News

*ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಯುವತಿಯರೂ ಸೇರಿ ನಾಲ್ವರ ಬಂಧನ*

ಪ್ರಗತಿ ವಾಹಿನಿ ಸುದ್ದಿ, ಗೋಕಾಕ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಯುವತಿಯರೂ ಸೇರಿದಂತೆ ಮತ್ತೆ 4 ಆರೋಪಿಗಳನ್ನು ಗೋಕಾಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 45ಕ್ಕೆ ಏರಿದೆ.

ಗೋಕಾಕ ತಾಲೂಕು ಮರದಿಮಠದ ವೈಷ್ಣವಿ ಬಾಳಪ್ಪ ಸನದಿ (21), ಉಪ್ಪಾರಟ್ಟಿಯ ಸುಧಾರಾಣಿ ಹುವಪ್ಪ ಅರಬಾಂವಿ (24), ತುಕ್ಕಾನಟ್ಟಿಯ ಐಶ್ವರ್ಯ ರಾಮಚಂದ್ರ ಬಾಗೆವಾಡಿ ಹಾಗೂ ಬಗರನಾಳದ ಬಸವರಾಜ ರಾಮಪ್ಪ ಹಾವಡಿ (27) ಬಂಧಿತ ಆರೋಪಿಗಳು.

ಇವರೆಲ್ಲರೂ ಕಳೆದ ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು.

 

Home add -Advt

ಆರೋಪಿತರಿಂದ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್, ಮೊಬೈಲ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.

*ಶತಮಾನದ ಸಂತ, ಜ್ಞಾನಯೋಗಿ; ಸಿದ್ದೇಶ್ವರ ಸ್ವಾಮೀಜಿ ಪಂಚಭೂತಗಳಲ್ಲಿ ಲೀನ*

https://pragati.taskdun.com/siddheshwara-shreelast-yatrafuneraljnanayogashrama/

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ಐವರ ಬಂಧನ; ಬಂಧಿತರ ಸಂಖ್ಯೆ 41ಕ್ಕೆ ಏರಿಕೆ

https://pragati.taskdun.com/kptcl-exam-scandal-5-arrested/

Related Articles

Back to top button