ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕಾಕದ ಅಗಸ್ತ್ಯ ಕೋಚಿಂಗ್ ಸೆಂಟರದ ಮಾಲೀಕ ಬಾಳೇಶ್ ಕೆಂಚಪ್ಪ ಕಟ್ಟಿಕಾರ್ (ವಯಸ್ಸು 26 ವರ್ಷ ಸಾ: ರಾಜಾಪುರ ತಾ: ಮೂಡಲಗಿ ) ಬಂಧಿತ.
ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 96-2022 ನೇಯ ಪ್ರಕರಣದಲ್ಲಿ ತನಿಖಾಧಿಕಾರಿ ಡಿಸಿಆರ್ ಬಿ ಡಿಎಸ್ಪಿ ವೀರೇಶ್ ತಿ ದೊಡಮನಿ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಈ ಕೇಸಿನಲ್ಲಿಯ ಪರಾರಿಯಾಗಿದ್ದ ಪ್ರಮುಖ ಆರೋಪಿ ಬಾಳೇಶ್ ಬಲೆಗೆ ಬಿದ್ದಿದ್ದಾನೆ.
ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ನಡೆದ ಪರೀಕ್ಷೆಯ ಕಾಲಕ್ಕೆ ಪರೀಕ್ಷೆಗೆ ಕುಳಿತಿರುವ 17ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಈಗಾಗಲೇ ಬಂಧಿತ ಆರೋಪಿಗಳಾದ ಸಂಜೀವ್ ಭಂಡಾರಿ, ಮಂಜುನಾಥ್ ಮಾಳಿ ಮತ್ತು ಶ್ರೀಧರ್ ಕಟ್ಟಿಕಾರ್ ಇನ್ನಿತರರೊಂದಿಗೆ ಸೇರಿಕೊಂಡು ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್ ಇತ್ಯಾದಿಗಳನ್ನು ಕೊಟ್ಟು ಕಳುಹಿಸಿ ಡಿವೈಸ್ ತೆಗೆದುಕೊಂಡು ಹೋದ ಅಭ್ಯರ್ಥಿಗಳಿಗೆ ಉತ್ತರಗಳನ್ನು ಹೇಳಿ ಬರೆಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಈತನ ಮೇಲಿದೆ.
ನ್ಯಾಯಾಲಯದ ಮುಂದೆ ಹಾಜರಾಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ 6 ಆರೋಪಿಗಳ ಬಂಧನ
https://pragati.taskdun.com/kptcl-exam-scandal6-accusedarrested/
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ; ಹನುಮಂತನ ಬಾಲದಂತೆ ಬೆಳೆಯುತ್ತಿದೆ ಆರೋಪಿಗಳ ಸಂಖ್ಯೆ
https://pragati.taskdun.com/kptcl-exam-scam-another-accusedarrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ