Kannada NewsKarnataka NewsLatest

KPTCL Updates: ಜ್ಯೂನಿಯರ್ ಲೈನ್ ಮ್ಯಾನ್ ಬಂಧನ; ಬಂಧಿತರೆಲ್ಲರಿಗೆ ಜಾಮೀನು ನಿರಾಕರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಗಿರಿಯಪ್ಪ ಅಲಿಯಾಸ್ ಗಿರೀಶ್ ಫಕೀರಪ್ಪ ಬನಾಜ್ (ವಯಸ್ಸು: 22 ಉದ್ಯೋಗ: ಜ್ಯೂನಿಯರ್ ಲೈನ್ ಮ್ಯಾನ್  ಸಾ: ಅರಬಾಂವಿ) ನನ್ನು   ಬಂಧಿಸಿದ್ದು ಈತನು ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ಪ್ರಶ್ನೆಗಳಿಗೆ ಉತ್ತರಗಳನ್ನು ತಯಾರಿಸಿ ಅಭ್ಯರ್ಥಿಗಳಿಗೆ ಹೇಳಲು ಸಹಾಯ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಈ ಮಧ್ಯೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಮೊದಲ ಆರೋಪಿ ಸಿದ್ದಪ್ಪ ಮದಿಹಳ್ಳಿ, ಮೂರನೇ ಆರೋಪಿ ಸುನೀಲ ಬಂಗಿ, ಐದನೇ ಆರೋಪಿ ಸಿದ್ದಪ್ಪ ಕೊಟ್ಟಲ್, ಆರನೇ ಆರೋಪಿ ಸಂತೋಷ ಮಂಗಾವಿ, 7ನೇ ಆರೋಪಿ ರೇಣುಕಾ ಜವಾರಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ.
12ನೇ ಅಧಿಕ ಸತ್ರ ನ್ಯಾಯಾಲಯ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.

 

https://pragati.taskdun.com/crime-news/kptclscam-police-arrest-accused-mobiles-car-seized/

https://pragati.taskdun.com/latest/kptcl-examilleagl-case9-arrestedbelagavigokak/

 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button