Kannada NewsLatest

ಕೆ.ಆರ್.ಇ.ಡಿ.ಎಲ್ ಗೆ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ’: ರಾಜ್ಯ ಪರ್ಫಾಮೆನ್ಸ್ ವಿಭಾಗದಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮವು ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2021ರಡಿ ಉತ್ತಮ ಪರ್ಫಾಮೆನ್ಸ್ ವಿಭಾಗದಲ್ಲಿ (ಗ್ರೂಪ್-1) ಪ್ರಥಮ ಸ್ಥಾನ ಪಡೆದಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಪ್ರಯುಕ್ತ ನವದೆಹಲಿಯಲ್ಲಿ ಮಂಗಳವಾರ(ಡಿಸೆಂಬರ್ 14)ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಿದ್ಯುತ್ ಮತ್ತು ನವ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಆರ್.ಕೆ.ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ.ಕುಮಾರನಾಯಕ ಮತ್ತು ಕೆ.ಆರ್.ಇ.ಡಿ.ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ವಿದ್ಯುತ್ ಮತ್ತು ಬೃಹತ್ ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಕೃಷನ್ ಪಾಲ್ ಗುರ್ಜರ್ ಉಪಸ್ಥಿತರಿದ್ದರು.

ಇಂಧನ ಕ್ಷಮತೆ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿಗೆ ಈ ಗೌರವ ದೊರೆತಿದೆ. ರಾಜ್ಯ ಇಂಧನ ಕ್ಷಮತೆ ಇಂಡೆಕ್ಸ್ 2020ರಲ್ಲಿ, ಕರ್ನಾಟಕವು 100ರಲ್ಲಿ 70 ಅಂಕಗಳಿಸಿದೆ. ಕೇಂದ್ರ ಇಂಧನ ಸಚಿವಾಲಯದಡಿಯ ಬ್ಯೂರೋ ಆಫ್ ಎನರ್ಜಿಎಫೀಶಿಯನ್ಸಿ, ಪ್ರತಿ ವರ್ಷ ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾದಿನ ಪ್ರಯುಕ್ತ ಈ ಪ್ರಶಸ್ತಿ ನೀಡುವ ಮೂಲಕ ಇಂಧನ ಉಳಿತಾಯಕ್ಕೆ ಕೊಡುಗೆ ನೀಡುತ್ತಿರುವ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತದೆ.

ಈ ಕುರಿತು ಮಾತನಾಡಿದ ಇಂಧನ ಸಚಿವ ವಿ.ಸುನಿಲಕುಮಾರ್ ಅವರು “ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2021’ರಡಿ, ಕರ್ನಾಟಕ ಪ್ರಥಮಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಬ್ಯೂರೋ ಆಫ್ ಎನರ್ಜಿಎಫೀಶಿಯನ್ಸಿಯಿಂದ ನೀಡಿರುವ ಈ ಪ್ರಶಸ್ತಿಯು ಹಸಿರು ಇಂಧನ,ಪರಿಸರ ಸಂರಕ್ಷಣೆ, ಇಂಧನ ಕ್ಷಮತೆಗಾಗಿ ಕೆ.ಆರ್.ಇ.ಡಿ.ಎಲ್‌ನಿಂದ ಕೈಗೊಂಡ ಕ್ರಮಗಳ ಪ್ರತಿಬಿಂಬವಾಗಿದೆ” ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಂಧನ ಇಲಾಖೆಯ ಅಪರಮುಖ್ಯಕಾರ್ಯದರ್ಶಿ ಜಿ.ಕುಮಾರನಾಯಕ “ಕಳೆದ ವರ್ಷಕ್ಕೆ ಹೋಲಿಸಿದರೆ ಈಬಾರಿ 10 ಅಂಕಗಳು ಹೆಚ್ಚಾಗಿವೆ.ರಾಜ್ಯ ಹಾಗೂ ಸ್ಥಳೀಯಮಟ್ಟದಲ್ಲಿ, ಇಂಧನ ಕ್ಷಮತೆಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಗೌರವ ಉತ್ತೇಜನ ನೀಡಲಿದೆ. ನವೀಕರಿಸಬಹುದಾದ ಇಂಧನ ಬಳಕೆ ಪ್ರಮಾಣವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ವಹಿಸಲಾಗಿದೆ” ಎಂದು ತಿಳಿಸಿದರು.

ಪ್ರಶಸ್ತಿಯ ಕುರಿತು: ಕೇಂದ್ರ ಇಂಧನ ಸಚಿವಾಲಯದಿಂದ 1991ರಿಂದ ಈಪ್ರಶಸ್ತಿ ನೀಡಲು ಆರಂಭವಾಗಿದ್ದು,ಇಂಧನ ಉಳಿತಾಯದಲ್ಲಿ ಉತ್ತಮ ಕ್ರಮಕೈಗೊಂಡ ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ವರ್ಷವೂ ಇಂಧನ ಕ್ಷಮತೆಯಲ್ಲಿ ಸಾಧನೆ ತೋರಿದ ಕೈಗಾರಿಕಾ ಸಂಸ್ಥೆ, ಸಂಘಟನೆಗಳನ್ನು ಗುರುತಿಸಲು ಪ್ರಶಸ್ತಿ ನೀಡಲಾಗಿದೆ.

ಕೆ.ಆರ್.ಇ.ಡಿ.ಎಲ್ ಬಗ್ಗೆ: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನ,ಪ್ರೋತ್ಸಾಹಕ್ಕಾಗಿ ಕರ್ನಾಟಕ ಸರ್ಕಾರದ ನೋಡಲ್ ಏಜೆನ್ಸಿಯಾಗಿ 1996ರಲ್ಲಿ ಕೆ.ಆರ್.ಇ.ಡಿ.ಎಲ್ ಸ್ಥಾಪನೆಯಾಯಿತು.

ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಂಸ್ಥೆಯು ಏಜೆನ್ಸಿಗಳೊಂದಿಗೆ ಸಹಯೋಗ ಮಾಡುವುದರೊಂದಿಗೆ, ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಖಾಸಗಿ ಕ್ಷೇತ್ರಕ್ಕೆ,ಸರ್ಕಾರಕ್ಕೆ, ಖಾಸಗಿ ಇಂಧನ ಉತ್ಪಾದಕರೊಂದಿಗೆ ಸಮನ್ವಯ ಮಾಡುತ್ತದೆ.
ಪರಿಷತ್ ಚುನಾವಣೆ ಬಂಡಾಯ: ಬಿಜೆಪಿಯಿಂದ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button