Kannada NewsKarnataka NewsLatest

ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದ ಕ್ರಿಷಾ ತವರು ಮನೆಯವರು; ವಿಕೋಪಕ್ಕೆ ಹೋದ ಆತ್ಮಹತ್ಯೆ ವಿವಾದ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅರಗನ್ ತಲಾವ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ ಮತ್ತು ಇಬ್ಬರು ಮಕ್ಕಳ ಶವಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮಹಿಳೆಯ ತಾಯಿ ಮತ್ತು ಸಂಬಂಧಿಗಳು ಪಟ್ಟು ಹಿಡಿದಿದ್ದಾರೆ.

ಇದು ಆತ್ಮಹತ್ಯೆಯಲ್ಲಿ, ಕೊಲೆ ಎನ್ನುವುದು ಅವರ ಆರೋಪ. ಆರೋಪಿಗಳನ್ನು ಬಂಧಿಸಬೇಕು. ಪ್ರಕರಣದ ತನಿಖೆ ನಡೆಸಬೇಕು ಎನ್ನುವುದು ಅವರ ಪಟ್ಟು.

ಬಟ್ಟೆ ವ್ಯಾಪಾರಿಯಾಗಿರುವ ಮನೀಷ್ ಕೇಶ್ವಾನಿಯವರ ಪತ್ನಿ ಕ್ರಿಷಾ (೩೬) ಮತ್ತು ಮಕ್ಕಳಾದ ವೀರೇನ್ ( ೭) ಮತ್ತು ಭಾವೀರ್ (೪) ಅವರ ಶವ ಫೆ.೧೧ರಂದು ಹಿಂಡಲಗಾ ಗಣಪತಿ ದೇವಸ್ಥಾನದ ಬಳಿಯ ಕೆರೆಯಲ್ಲಿ ಪತ್ತೆಯಾಗಿತ್ತು.  ಕ್ರಿಷಾ ಮತ್ತು ಒಂದು ಮಗುವಿನ ಶವ ಶುಕ್ರವಾರವೇ ಸಿಕ್ಕಿದ್ದರೆ ಇನ್ನೋರ್ವ ಪುತ್ರನ ಶವ ಶನಿವಾರ ಪತ್ತೆಯಾಗಿತ್ತು.

ಕ್ರಿಷಾ ತಾಯಿ ಮತ್ತು ಸಹೋದರಿಯರು, ಕ್ರಿಷಾ ಅವರ ಪತಿ ಮನೀಷ್ ಕೇಶ್ವಾನಿ ಕುಟುಂಬದ ಮೇಲೆ ಕೊಲೆಯ ಆರೋಪ ಮಾಡಿದ್ದು, ಅವರನ್ನು ಬಂಧಿಸುವವರೆಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಮನೀಷ್ ಅವರ ಸಹೋದರ ದಿನೇಶ್ ಕೇಶ್ವಾನಿ, ಕ್ರಿಷಾ ಆತ್ಮಹತ್ಯೆಗೆ ಕ್ರಿಷಾ ಸಹೋದರಿಯ ಪತಿ ಮತ್ತು ತವರಿನವರೇ ಕಾರಣ ಎಂದು ಆರೋಪಿಸಿದ್ದಾರೆ.
ಮೀರಜ್‌ ನವರಾಗಿರುವ ಕ್ರಿಷಾ ತಾಯಿ ಮತ್ತು ತವರಿನ ಕಡೆಯವರು ಕ್ರಿಷಾಳನ್ನು ಕೊಲೆ ಮಾಡಲಾಗಿದೆ. ಪತಿ ಮನೀಷ್, ಅತ್ತಿಗೆ ಮೀನಾ, ನಾದಿನಿಯರಾದ ಆರತಿ, ಪೂಜಾ ಹಾಗೂ ಗೋವಾದಲ್ಲಿರುವ ಸಹೋದರಿಯ ಪತಿ ವಿಕ್ಕಿ ಛಟಾನಿ ಕಿರುಕುಳ ನೀಡಿದ್ದು ಸಾವಿಗೆ ಕಾರಣ ಎಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕ್ರಿಷಾ ಅವರ ಪತಿ ಹಾಗೂ ಮತ್ತು ಕುಟುಂಬಸ್ಥರನ್ನು ಬಂಧಿಸದ ಹೊರತು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.  ಹಾಗಾಗಿ ಶವಗಳು ಬಿಮ್ಸ್ ಶವಾಗಾರದಲ್ಲಿಯೇ ಉಳಿದಿತ್ತು. ಅಂತ್ಯ ಸಂಸ್ಕಾರ ಮಾಡುವಂತೆ ನಮ್ಮ ಮೇಲೆ ನಮ್ಮ ಮೇಲೆ ಒತ್ತಡ ತರಲಾಗುತ್ತಿದೆ. ಆದರೆ ನಮ್ಮ ಮಗಳು, ಇಬ್ಬರು ಮೊಮ್ಮಕ್ಕಳ ಸಾವಿಗೆ ನ್ಯಾಯ ಸಿಗದ ಹೊರತು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಕ್ರಿಷಾ ತಾಯಿ ಹಾಗೂ ತವರಿನ ಕಡೆಯವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಆದರೆ ಈ ಆರೋಪವನ್ನು ಮನೀಷ್ ಅವರ ಸಹೋದರ ದಿನೇಶ್ ಕೇಶ್ವಾನಿ ಅಲ್ಲಗಳೆದಿದ್ದಾರೆ. ಮನೀಷ್ ಅವರು ಪತ್ನಿಯ ಜೊತೆ ಅನ್ಯೋನ್ಯವಾಗಿದ್ದರು.  ಸುತ್ತ ಮುತ್ತಲಿನ ಯಾವುದೇ ನಿವಾಸಿಗಳನ್ನು ಕೇಳಿದರೂ ಮನೀಷ್ ಅವರ ವ್ಯಕ್ತಿತ್ವದ ಬಗ್ಗೆ ಹೇಳುತ್ತಾರೆ ಎಂದು ದಿನೇಶ್ ಹೇಳಿದ್ದಾರೆ.
ಅಂತ್ಯ ಸಂಸ್ಕಾರ ಮಾಡದೇ ಶವವನ್ನು ಶವಾಗಾರದಲ್ಲಿಯೇ ಇಡುವುದು ಅಮಾನವೀಯ, ಕೂಡಲೇ ಅಂತ್ಯ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ವ್ಯಕ್ತಿಯೊಬ್ಬರ  ಜೊತೆ ಕ್ರಿಷಾ ಆಡಿದ ಕೆಲ ಅಶ್ಲೀಲ ಸಂಭಾಷಣೆಯ ಆಡಿಯೊ, ಕ್ರಿಷಾ ಸಹೋದರಿಯ ಪತಿಗೆ ದೊರಕಿತ್ತು. ಅದನ್ನು ಅವರು ಮನೀಷ್‌ಗೂ ಕಳಿಸಿದ್ದರು. ಮನೀಷ್ ಆಡಿಯೋ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ವಿಕ್ಕಿ ಛಟಾನಿ ಮತ್ತು ಕ್ರಿಷಾರ ತವರಿನ ಕಡೆಯವರು ಈ ಆಡಿಯೋ ವಿಚಾರವಾಗಿ ಕ್ರಿಷಾಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಕಳೆದ ಐದು ವರ್ಷಗಳಿಂದ ಕಿರುಕುಳ ಸಹಿಸಲಾಗದೆ ಕ್ರಿಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಆರೋಪಿಸಿದ್ದಾರೆ.

ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಎರಡೂ ಕುಟುಂಬಗಳ ನಡುವೆ ಬೀದಿ ಜಗಳವಾಗಿ ಮಾರ್ಪಟ್ಟಿದೆ.

ಹಿಂಡಲಗಾ ಗಣಪತಿ ಮಂದಿರ ಬಳಿ ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ; ತಾಯಿ, ಓರ್ವ ಮಗ ಸಾವು, ಇನ್ನೋರ್ವನಿಗಾಗಿ ಹುಡುಕಾಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button