ಪ್ರಗತಿವಾಹಿನಿ ಸುದ್ದಿ, ಧಾರವಾಡ – ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರು, ಕನ್ನಡಪರ ಚಿಂತಕರು ಹಾಗೂ ಕೆ ಇ ಬೋರ್ಡ್ ಶಾಲೆಯ ಹಾಗೂ ವಿದ್ಯಾರಣ್ಯ ಶಾಲೆಯ ವಿಶ್ರಾಂತ ಶಿಕ್ಷಕರ ಕೃಷ್ಣ ಜೋಶಿ ನಿಧನರಾಗಿದ್ದಾರೆ.
ಹೃದಯಾಘಾತದಿಂದ ಮಂಗಳವಾರ ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ತಮ್ಮ 76 ನೇಯ ವಯಸ್ಸಿನಲ್ಲಿ ಅವರು ದೈವಾಧೀನರಾದರು.
24 ಆಗಸ್ಟ್ 1945 ರಂದು ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಮಠದಲ್ಲಿ ಜನಿಸಿದ ಕೃಷ್ಣ ಜೋಶಿಯವರು, ಮಗ ಸುನಿಲ್ ಜೋಶಿ, ಸೊಸೆ ಅಶ್ವಿನಿ ಜೋಶಿ ಮೊಮ್ಮಗಳು ಸಿರಿ ಜೋಶಿ, ಮಗಳು ಡಾ ಸುನಿತಾ ಜೋಶಿ, ಅಳಿಯ ರವಿ ಜೋಶಿ ಹಾಗೂ ಮೊಮ್ಮಗ ಸ್ವಸ್ತಿಕ ಜೋಶಿ ಹಾಗೂ 4 ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಮತ್ತು ಅಪಾರ ಸಂಖ್ಯೆಯ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಇವರ ಕೊನೆಯ ತಮ್ಮ ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ ಮಹೇಶ ಜೋಶಿ.
ಬುಧವಾರ ಅಂದರೆ ಬುಧವಾರ ಜುಲೈ 7 ರಂದು, ಬೆಳಿಗ್ಗೆ 9.30 ಗಂಟೆಗೆ ಕಾರ್ಗಿಲ್ ಸ್ಮಾರಕ ಬಳಿ, ನಂತರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.
ದಾನಕ್ಕೂ, ದುಡ್ಡಿಗೂ ಸಂಬಂಧವೇ ಇಲ್ಲ- ಸುಧಾಮೂರ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ