Latest

ಭಾರತ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಎಂದ ಕ್ರಿಸ್ಟಲಿನಾ ಜಾರ್ಜಿವಾ

ಪ್ರಗತಿವಾಹಿನಿ ಸುದ್ದಿ, ಸೋಫಿಯಾ (ಬಲ್ಗೇರಿಯಾ): 2022 ರಲ್ಲಿ ಅಂದಾಜು ಶೇ.3.4 ರಿಂದ 2023 ರಲ್ಲಿ ಶೇ.2.9 ಗೆ ಜಾಗತಿಕ ಬೆಳವಣಿಗೆಯಲ್ಲಿ ನಿರೀಕ್ಷಿತ ಕುಸಿತದ ಮಧ್ಯೆ, ಭಾರತ ದೇಶ ಉನ್ನತ ಸಾಧನೆ ಮಾಡಿ ಮಿಂಚುತ್ತಿದ್ದು ಇದು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಶ್ಲಾಘಿಸಿದ್ದಾರೆ.

ಈ ಮೂಲಕ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ FY23 ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6.8 ನಲ್ಲಿ ಉಳಿಸಿಕೊಂಡಿದೆ ಎಂಬುದನ್ನು  ಅವರು ಖಾತ್ರಿಪಡಿಸಿದೆ.

ಕಳೆದ ಮೂರು ವರ್ಷಗಳಿಂದ ಇಡೀ ಜಗತ್ತೇ ಕರೋನಾದ ಹೊಡೆತಕ್ಕೆ ಸಿಲುಕಿ, ಬಹುತೇಕ ಎಲ್ಲ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಹದೆಗೆಟ್ಟ ನಂತರವೂ ಭಾರತ ವಿಶ್ವ ಆರ್ಥಿಕತೆಯಲ್ಲಿ ಪ್ರಬಲ ಸ್ಥಾನ ಗಳಿಸುವಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದು ಅವರು ಹೇಳಿದ್ದಾರೆ.

2023 ರ ಜಾಗತಿಕ ಬೆಳವಣಿಗೆಗೆ ಶೇ.15 ರಷ್ಟು ಕೊಡುಗೆಯನ್ನು ಭಾರತ ನೀಡಲಿದೆ. ಡಿಜಿಟಲೀಕರಣವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಸಾಂಕ್ರಾಮಿಕ ರೋಗದಿಂದ ಹೊರತಂದಿದೆ. ಮಾರ್ಚ್‌ಗೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಭಾರತ  ಶೇ. 6.8  ಬೆಳವಣಿಗೆ ದರವನ್ನು ಕಾಯ್ದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ  ಎಂದು ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಕ್ರೀಡೆಯಿಂದ ಸದೃಢತೆ ಸಾಧಿಸಿ ಬಲಾಢ್ಯ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಿ : ಲಕ್ಷ್ಮೀ ಹೆಬ್ಬಾಳಕರ

https://pragati.taskdun.com/gain-strength-through-sports-and-herald-the-building-of-a-strong-nation-lakshmi-hebbalkara/

ಕ್ರೀಡೆಯಿಂದ ಸದೃಢತೆ ಸಾಧಿಸಿ ಬಲಾಢ್ಯ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಿ : ಲಕ್ಷ್ಮೀ ಹೆಬ್ಬಾಳಕರ

https://pragati.taskdun.com/gain-strength-through-sports-and-herald-the-building-of-a-strong-nation-lakshmi-hebbalkara/

*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಇಂಜಿನಿಯರ್*

https://pragati.taskdun.com/bescomengeneerlokayukta-arrrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button