
ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯ(KRS)ದಲ್ಲಿ ಅವಾಂತರ ಸಂಭವಿಸಿದೆ. ಕೆಆರ್ ಎಸ್ ಡ್ಯಾಂ ಗೇಟ್ ಏಕಾಏಕಿ ಓಪನ್ ಆಗಿದ್ದು, ನೀರುಪೋಲಾಗಿದೆ.
ಬರೋಬ್ಬರಿ 24 ಗಂತೆಗಳ ಕಾಲ ಗೇಟ್ ಓಪನ್ ಆಗಿ ಜಲಾಸಯದಿಂದ ನೀರು ಹರಿದು ಹೋದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಅನುಮಾನಕ್ಕೆ ಕಾರಣವಗಿದೆ. ಭಾನುವಾರ ರಾತ್ರಿ ಇದ್ದಕ್ಕಿದಂತೆ ಕೆ.ಆರ್.ಎಸ್ ಡ್ಯಾಂ +80 ಗೇಟ್ ಗಳು ತೆರೆದಿದ್ದು ಸೋಮವಾರ ರಾತ್ರಿ ಕಾವೇರಿ ನಿಗಮದ ಅದಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಅಲ್ಲಿವರೆಗೆ ಬರೋಬ್ಬರಿ 2000 ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿದಿದೆ.
ಡ್ಯಾಮ್ ಗೇಟ್ ನ ಮೋಟರ್ ರಿವರ್ಸ್ ಆಗಿ ಗೇಟ್ ತೆರೆದಿರಬಹುದೇ? ಅಥವಾ ಸಿಬ್ಬಂದಿಗಳೇ ಗೇಟ್ ತೆರೆದಿದ್ದಾರೆಯೇ? ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಡ್ಯಾಂ ಗೇಟ್ ಓಪನ್ ಆಗಿದ್ದು ಹಲವು ಅನುಮಾನಕ್ಕೆ ಕಾರಣವಗಿದೆ.