Latest

ಕರಕುಶಲ ವಸ್ತು ಪ್ರದರ್ಶನ: ಚಲನಚಿತ್ರ ನಟಿ ಸಿರಿ ಪ್ರಹ್ಲಾದ್ ಭೇಟಿ; ಮಹಿಳಾ ಕುಶಲಕರ್ಮಿಗಳ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮವು ಫೆಬ್ರವರಿ 27 ರಿಂದ ಮಾರ್ಚ್ 8 ರವರೆಗೆ ಜೆಪಿ ನಗರದ ಸಿಂಧೂರ್ ಕನ್ವೆನ್ಷನ್ ಹಾಲ್‌ನಲ್ಲಿ ಕರಕುಶಲ ವಸ್ತು ಪ್ರದರ್ಶನವನ್ನು ಆಯೋಜಿಸಿದೆ.

ಫೆಬ್ರವರಿ 29, ಮಂಗಳವಾರ,   ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಭಾರತೀಯ ಚಲನಚಿತ್ರ ನಟಿ ಸಿರಿ ಪ್ರಹ್ಲಾದ್ ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ನಿಗಮದ ಎಂಡಿ ಡಿ. ರೂಪಾ ಮೌದ್ಗಿಲ್  ಸಿರಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ 10 ಮಹಿಳಾ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು. ಇದು ಕುಶಲಕರ್ಮಿಗಳನ್ನು ಅಭಿನಂದಿಸಲು ಡಿ. ರೂಪಾ ಪ್ರಾರಂಭಿಸಿದ ಹೊಸ ಹೆಜ್ಜೆಯಾಗಿದೆ.

ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ

Home add -Advt

Related Articles

Back to top button