ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ ವ್ಯವಸ್ಥೆ ಮಾಡುತ್ತೇವೆ ಎಂದು ಕೆ.ಎಸ್.ಆರ್.ಟಿ.ಸಿ ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ
ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು, ಆಟೋ ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಈ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್‍ಗಳನ್ನು ಬಿಡುತ್ತೇವೆ. ಆದರೆ ಡಿಮ್ಯಾಂಡ್ ಎಷ್ಟಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಮೊದಲ ವಾರ ಪ್ರಾಥಮಿಕ ಹಂತದಲ್ಲಿ ಶೇ.20 ರಿಂದ 30 ರಷ್ಟು ಬಸ್ ಗಳು ಮಾತ್ರ ಕಾರ್ಯಚರಣೆ ನಡೆಸಲಿವೆ. ಎರಡನೇ ವಾರದಲ್ಲಿ ಬಹುತೇಕ ಹೆಚ್ಚಿನ ಬಸ್‍ಗಳನ್ನು ಬಿಡುತ್ತೇವೆ. ಈ ವೇಳೆ 30 ಸೀಟ್ ಗಳಿಗೆ ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ