Latest

ರಾಜ್ಯದಲ್ಲಿ ಒಂದೇ ದಿನ 99 ಜನರಲ್ಲಿ ಕೊರೊನಾ; ಬೆಳಗಾವಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು, ಒಂದೇ ದಿನ 99 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಬೆಂಗಳೂರು 24, ಮಂಡ್ಯ 17, ಕಲಬುರಗಿಯಲ್ಲಿ 10, ಉತ್ತರ ಕನ್ನಡ 9, ರಾಯಚೂರು 6, ವಿಜಯಪುರ 5, ಗದಗ 5, ಯಾದಗಿರಿ 5, ಹಾಸನ 4, ಕೊಪ್ಪಳ 3, ಬೆಳಗಾವಿ 2, ದಕ್ಷಿಣ ಕನ್ನಡ 2, ಮೈಸೂರು, ಬೀದರ್, ಬಳ್ಳಾರಿ, ಉಡುಪಿ, ದಾವಣಗೆರೆ, ಕೊಡಗಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

Home add -Advt

ಬೆಂಗಳೂರಿನಲ್ಲಿ ಕಂಟೇನ್ಮೆಂಟ್ ಝೋನ್ ನಲ್ಲಿ ಚಿಕ್ಕ ಚಿಕ್ಕ ಮಕ್ಕಳಲ್ಲಿ ಕೂಡ ಸೋಂಕು ಪತ್ತೆಯಾಗಿದೆ. 8 ವರ್ಷದ ಬಾಲಕಿ, 11 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.

Related Articles

Back to top button