Kannada NewsKarnataka NewsLatest

ಬಾವಿಯಲ್ಲಿ ಬಿದ್ದು ಯುವಕನ ಸಾವು

ಪ್ರಗತಿವಾಹಿನಿ ಸುದ್ದಿ, ಕಬ್ಬೂರ – ಪಟ್ಟಣದ ಹೊರವಲಯ ಕಬ್ಬೂರ -ಕೆಂಚ್ಚನಟ್ಟಿ ರಸ್ತೆ ಮಧ್ಯೆ ತೋಟದ ಬಾವಿಯಲ್ಲಿ ಪಂಪ್ ಸೆಟ್ ಕೋಡ್ರಿಸಲು ಹೋಗಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮಲ್ಲೇಶ ಮಹಾದೇವ ಕಾಮಗೌಡ(೨೧)  ಬಾವಿಯಲ್ಲಿ ಪಂಪ್ ಸೆಟ್ ಕೋಡ್ರಿಸುವ ಸಮಯದಲ್ಲಿ ಆಯಾ ತಪ್ಪಿ ಬಾವಿಯಲ್ಲಿ ಬಿದ್ದು ಮೃತಪಟ್ಟದ್ದು, ಚಿಕ್ಕೋಡಿಯ ಅಗ್ನಿಶಾಮಕ ದಳದವರು ಬಂದು ಶವ ಹೊರತೆಗೆದರು.

ಹೆಚ್ಚಿನ ತನಿಖೆಗಾಗಿ ಚಿಕ್ಕೋಡಿ ಪೋಲಿಸ್ ಪಿಎಸ್‌ಐ ರಾಕೇಶ ಬಗಲಿ ಮತ್ತುಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಸಿಲಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.

Home add -Advt

Related Articles

Back to top button