Film & EntertainmentKannada NewsKarnataka NewsLatestPolitics

*ಯತ್ನಾಳ ಉಚ್ಛಾಟನೆಗೆ ಕೂಡಲಸಂಗಮ ಸ್ವಾಮೀಜಿ ವಿರೋಧ: ಮಹತ್ವದ ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವುದಕ್ಕೆ ಕುಡಸಂಗಮ ಪಂಚಮಸಾಲಿ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದು, ಇಂದು ಬೆಳಗಾವಿಯ ಗಾಂಧಿ ಭವನದಲ್ಲಿ ಶ್ರೀಗಳ ನೇತೃತ್ವ ಸಭೆ ಕರೆಯಲಾಗಿದೆ.‌

ಕೂಡಲಸಂಗಮ ಸ್ವಾಮೀಜಿ ನೇತೃತ್ವದಲ್ಲಿ ಯತ್ನಾಳರ‌ನ್ನು ಉಚ್ಚಾಟನೆ ಮಾಡಿರುವ ಕ್ರಮ ಖಂಡಿಸಿ ಸಭೆ ಕರೆಲಾಗಿದೆ. ಈ ಸಭೆಯಲ್ಲಿ ಪಂಚಮಸಾಲಿ ಮುಖಂಡರು, ಮೀಸಲಾತಿ ‌ಹೋರಾಟದ ಪದಾಧಿಕಾರಿಗಳು ಇರಲಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಬಿಜೆಪಿಯಲ್ಲಿರುವ ಪಂಚಮಸಾಲಿ ಸಮಾಜದವರೆಲ್ಲ ಬಿಜೆಪಿಗೆ ರಾಜಿನಾಮೆ ನೀಡಿ ಹೊರಬರಬೇಕು ಎಂದು ಅವರು ಕರೆ ನೀಡಿದ್ದಾರೆ.

ಯತ್ನಾಳ ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾವೆಲ್ಲ ಬದ್ದರಾಗಿದ್ದೇವೆ ಎಂದೂ ಸ್ವಾಮೀಜಿ ಹೇಳಿದ್ದಾರೆ.

Home add -Advt

Related Articles

Back to top button