Latest

ಮಾಜಿ ಸಿಎಂ,ರಾಜಕೀಯ ನಾಯಕರು, ಸಾಹಿತಿ, ನಟ ಸೇರಿ 61 ಜನರಿಗೆ ಜೀವ ಬೆದರಿಕೆ ಪತ್ರ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಮಾಜಿ ಸಿಎಂಗಳು, ನಟ, ಸಾಹಿತಿಗಳು ಸೇರಿದಂತೆ 61 ಗಣ್ಯ ವ್ಯಕ್ತಿಗಳಿಗೆ ಜೀವ ಬೆದರಿಗೆ ಪತ್ರ ಬಂದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಸಾಹಿತಿ ಕುಂ.ವೀರಭದ್ರಪ್ಪ ಮನೆಗೆ ಈ ಪತ್ರ ಬಂದಿದೆ. ಇದು ವೀರಭದ್ರಪ್ಪನವರಿಗೆ ಬರುತ್ತಿರುವ ಎರಡನೇ ಜೀವಬೆದರಿಕೆ ಪತ್ರವಾಗಿದೆ.

Home add -Advt

ಈ ಪತ್ರ ಚಿತ್ರದಿಂದ ಬಂದಿದೆ ಎಂದು ತಿಳಿದುಬಂದಿದೆ. ಪತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಶ್ರೀ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್, ನಟ ಪ್ರಕಾಶ್ ರಾಜ್, ಸಾಹಿತಿ ಕುಂ.ವೀರಭದ್ರಪ್ಪ ಸೇರಿದಂತೆ 61 ಜನರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸಾಹಿತಿಗಳು ರಕ್ಷಣೆಗಾಗಿ ಪೊಲೀಸರ ಮೊರೆಹೋಗಿದ್ದಾರೆ.
ಆಸಿಡ್ ದಾಳಿ ಆರೋಪಿ ಮೇಲೆ ಗುಂಡಿನ ದಾಳಿ

Related Articles

Back to top button