*ಕುಂಭಮೇಳಕ್ಕೆ ತೆರಳಿರುವ ಬೆಳಗಾವಿಯ 5 ಭಕ್ತರು ನಾಪತ್ತೆ?*: *ಕುಟುಂಬದವರು ಡಿಸಿ ಕಚೇರಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ*
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿರುವ ಬೆಳಗಾವಿ ಐವರು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷ್ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಳಗಾವಿಯಿಂದ 30 ಜನರು ಕುಂಭಮೇಳಕ್ಕೆ ತೆರಳಿದ್ದು ಅವರಲ್ಲಿ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಂಭಮೇಳದಲ್ಲಿ ಶಾಹಿ ಸ್ನಾನಕ್ಕೆಂದು 10 ಕೋಟಿಗೂ ಅಧಿಕ ಭಕ್ತರು ಆಗಮಿಸುತ್ತಾರೆ. ಬೆಳಗಾವಿಯಿಂದ 30 ಜನರು ತೆರಳಿದ್ದು, ಅವರಲ್ಲಿ ಐವರು ಟ್ರ್ಯಾವೆಲ್ ಏಜೆನ್ಸಿ ಮೂಲಕ ಹೋಗಿದ್ದಾರೆ, ಹೀಗೆ ಹೋದ ಐವರು ನಾಪತ್ತೆಯಾಗಿದ್ದಾರೆ. ಕಾಲ್ತುಳಿತ ಘಟನೆ ಬಳಿಕ ಐವರು ನಾಪತ್ತೆಯಾಗಿದ್ದಾರೆ. ಜನಜಂಗುಳಿ ಹೆಚ್ಚಿರುವುದರಿಂದ ಸಂಪರ್ಕಕ್ಕೆ ಸಿಗಲು ಕಷ್ಟವಗಿರಬಹುದು. ಆದರೆ ಐವರ ಪತ್ತೆಗಾಗಿ ಪ್ರಯಾಗ್ ರಾಜ್ ಜಿಲ್ಲಾಡಳಿತದ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ ಎಂದರು.
ಈವರೆಗೂಕುಟುಂಬದವರು ಯಾರೂ ದೂರು ನೀಡಿಲ್ಲ. ಆದರೆ ಟ್ರ್ಯಾವೆಲ್ ಏಜೆನ್ಸಿಯಿಂದ ಹೋದ ಐವರು ನಾಪತ್ತೆಯಾಗಿದ್ದಾರೆ ಎಂಬ ಮಹಿತಿ ಬಂದಿದೆ. ನಾಪತ್ತೆಯಾದವರ ಕುಟುಂಬಗಳು ಜಿಲ್ಲಾದಿಕಾರಿ ಕಚೇರಿಗೆ ಭೇಟಿ ನೀಡಬಹುದು. ವಾಹನಗಳ ಸಮಸ್ಯೆ ಇದ್ದರೆ ನಾವೇ ಸೂಕ್ತ ವ್ಯವಸ್ಥೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಪ್ರಯಾಗ್ ರಾಜ್ ಗೆ ತೆರಳುವವರಿಗೆ ಗೈಡ್ ಲೈನ್ಸ್ ನೀಡುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ