Belagavi NewsBelgaum NewsNational
*ಕುಂಭಮೇಳದಲ್ಲಿ ಕಾಲ್ತುಳಿತ: ಬೆಳಗಾವಿ ದಂಪತಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮತ್ತೊಂದು ಭೀಕರ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಕರ್ನಾಟಕದ ಹಲವು ಯಾತ್ರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಮೂಲದ ದಂಪತಿ ಸೇರಿದಂತೆ ರಾಜ್ಯದ ಅನೇಕ ಭಕ್ತರು ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ.
ಬೆಳಗಾವಿಯ ಅರುಣ್ ಹಾಗೂ ಕಾಂಚನಾ ಕೋಪರ್ಡೆ ದಂಪತಿ ಗಾಯಗೊಂಡಿದ್ದಾರೆ. ಇವರು ಬೆಳಗಾವಿ ನಗರದ ಶೆಟ್ಟಿಗಲ್ಲಿ ದಂಪತಿಯಾಗಿದ್ದಾರೆ. ಇಬ್ಬರಿಗೂ ಪ್ರಯಾಗ್ ರಾಜ್ ನ ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ರಾಜ್ಯದ ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿದಲ್ಲಿ 50 ಜನರು ಗಾಯಗೊಂಡಿದ್ದು, ಕೆಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.


