
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಹವ್ಯಕ ಮಂಡಲ ಹಾಗೂ ಸ್ವರ್ಣವಲ್ಲಿ ಸೇವಾ ಸಮಿತಿ ವತಿಯಿಂದ ನಗರದ ಪ್ರೊಗ್ರೆಸೀವ್ ಟ್ರೇಡರ್ಸ್ ನ ಗೀತಾಗಂಗಾ ಕಟ್ಟಡದ ಮಹಡಿಯಲ್ಲಿ ಲಲಿತಾ ಪಂಚಮಿ ನಿಮಿತ್ತ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಗಾವಿ ನಗರದ ವಿವಿಧ ಭಾಗಗಳ 150 ಕ್ಕೂ ಹೆಚ್ಚು ಸುಮಂಗಲೆಯರು ಶ್ರದ್ಧಾ ಭಕ್ತಿಯಿಂದ ಶ್ರೀ ಲಲಿತಾ ದೇವಿಯನ್ನು ಕುಂಕುಮಾರ್ಚನೆ ಸೇವೆ ಯೊಂದಿಗೆ ಆರಾಧಿಸಿದರು. ಕಳೆದ 24 ವರ್ಷಗಳಿಂದ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ಆದೇಶದಂತೆ ಈ ಕಾರ್ಯಕ್ರಮ ನಡೆದು ಬರುತ್ತಿದ್ದು, ವಿದ್ವಾನ್ ಶ್ರೀ ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.

ಸ್ಥಳಾವಕಾಶ ಮಾಡಿಕೊಟ್ಟ ಶ್ರೀ ಪರಮೇಶ್ವರ ಹೆಗಡೆ ಹಾಗೂ ಗೀತಾ ಹೆಗಡೆ ದಂಪತಿಗೆ ಕೃತಜ್ಞತೆ ಸಲ್ಲಿಸಲಾಯಿತು. ಶ್ರೀಧರ ಹೆಗಡೆ ಹಾಗೂ ಗಂಗಾ ಹೆಗಡೆ ದಂಪತಿ ಮಹಿಳೆಯರಿಗೆ ಉಡಿ ತುಂಬಿದರು. ನಂತರ ಪ್ರಸಾದ ಭೋಜನ ಕಾರ್ಯಕ್ರಮ ನಡೆಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ