Latest

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಖ್ಯಾತ ಉದ್ಯಮಿ

ಪ್ರಗತಿವಾಹಿನಿ ಸುದ್ದಿ; ಕುಂದಾಪುರ: ಖ್ಯಾತ ಉದ್ಯಮಿ, ಪ್ರಸಿದ್ಧ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯ ಕೋಟೇಶ್ವರದಲ್ಲಿ ನಡೆದಿದೆ.

ಕೋಟೆಶ್ವರದ ಪುರಾಣಿಕ ರಸ್ತೆಯಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವವರ ಮನೆಯ ಸಿಟೌಟ್ ನಲ್ಲಿ ಕಟ್ಟೆ ಭೋಜಣ್ಣ (80) ರಿವಾಲ್ವರ್ ನಿಂದ ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹಲವಾರು ಹೋಟೆಲ್, ಬಟ್ಟೆ ಅಂಗಡಿ, ಕುಂದಾಪುರದಲ್ಲಿ ಚಿನ್ಮಯಿ ಆಸ್ಪತ್ರೆ ನಡೆಸುತ್ತಿದ್ದ ಕಟ್ಟೆ ಭೋಜಣ್ಣ ಶಿಸ್ತಿಗೆ ಹೆಸರಾಗಿದ್ದರು. ಭೂಮಿ ಹಾಗೂ ಹಣದ ವ್ಯವಹಾರವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಕಟ್ಟೆ ಭೋಜಣ್ಣ ಪತ್ನಿ ಭಾಗೀರಥಿ, ಪುತ್ರರಾದ ಸುಧಿ, ಗುಂಡ ಹಾಗೂ ಮಗಳು ಸುಮಾ ಪುತ್ರನ್ (ಡಾ.ಉಮೇಶ್ ಪುತ್ರನ್ ಪತ್ನಿ) ಅವರನ್ನು ಅಗಲಿದ್ದಾರೆ.
ಶಾಲಾ ಬಸ್ ಹರಿದು ಬಾಲಕಿ ದುರ್ಮರಣ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button