ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಶಶಿಧರ ಕುರೇರ ಅಧಿಕಾರ ಸ್ವೀಕರಿಸಿದ್ದಾರೆ. 3ನೇ ಬಾರಿಗೆ ಅವರು ಎಂಡಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರಾದರೂ ಇದೇ ಮೊದಲ ಬಾರಿಗೆ ಪೂರ್ಣಾವಧಿ ಎಂಡಿಯಾಗಿದ್ದಾರೆ.
ಶನಿವಾರ ಬೆಳಗ್ಗೆ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಹುದ್ದೆ ಜೊತೆಗೆ ಹೆಚ್ಚುವರಿಯಾಗಿ ಸ್ಮಾರ್ಟ್ ಸಿಟಿ ಎಂಡಿ ಹುದ್ದೆ ಪ್ರಭಾರ ನಿರ್ವಹಿಸಿದ್ದರು. ಇದೀಗ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರಾಗಿದ್ದ ಕುರೇರ ಇಂದು ಬೆಳಗ್ಗೆ ಅಲ್ಲಿಂದ ಬಿಡುಗಡೆಯಾದರು.
ಶಿರಿನ್ ನದಾಫ್ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿಯಾಗಿ 2 ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರು ಕೆಎಂಎಸ್ ಗ್ರೇಡ್ ನವರಾಗಿದ್ದರಿಂದ ವಿವಾದವೆದ್ದಿತ್ತು. ಆದಾಗ್ಯೂ ಅವರು ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ಕೆಲವು ಹಿರಿಯ ರಾಜಕಾರಣಿಗಳಿಂದ ಸಹ ಮುಂದುವರಿಕೆಗೆ ಶಿಫಾರಸ್ಸು ಪತ್ರ ಪಡೆದಿದ್ದರು.
ಹಾಗಾಗಿ ಕುರೇರ ಅವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಿ, ಅಲ್ಲಿಂದ ಪುನರಾದೇಶ ವಿಳಂಬವಾಯಿತು. ಶುಕ್ರವಾರ ನಗರಾಭಿವೃದ್ಧಿ ಇಲಾಖೆ ಪುನರಾದೇಶ ಹೊರಡಿಸಿದ್ದರಿಂದ ಕುರೇರ ಇಂದು ಅಧಿಕಾರ ಸ್ವೀಕರಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಇನ್ನಾದರೂ ಜನಸ್ನೇಹಿ.ಾಗಿ, ಚುರುಕು ಪಡೆಯಲಿ ಎನ್ನುವುದು ಜನರ ಆಶಯವಾಗಿದೆ.
ಸಂಬಂಧಿಸಿದ ಸುದ್ದಿ –
ಶಶಿಧರ ಕುರೇರ್ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ
ಶಿರೀನ್ ನದಾಫ್ ಸ್ಮಾರ್ಟ್ ಸಿಟಿ ಎಂಡಿ
ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಡಾಂಬರ್ ಹೊಯ್ದು ಮುಚ್ಚಲು ಯತ್ನ -Pragativahini Exclusive
ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಡಾಂಬರ್ ಹೊಯ್ದು ಮುಚ್ಚಲು ಯತ್ನ -Pragativahini Exclusive
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ