Latest

*ಮತ್ತೊಂದು ಬೆಂಕಿ ದುರಂತ: ಇಬ್ಬರು ಮಕ್ಕಳು ಸೇರಿ ನಾಲ್ವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಅಪಾರ್ಟ್ ಮೆಂಟ್ ಮನೆಯಲ್ಲಿ ಸಂಭವಿಸುಇದ ಭೀಕರ ಬೆಂಕಿ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ಕುವೈತ್ ನಲ್ಲಿ ನಡೆದಿದೆ.

Home add -Advt

ಕುವೈತ್ ನ ಅಬ್ಬಾಸಿಯಾದಲ್ಲಿ ಈ ದುರಂತ ಸಂಭವಿಸಿದೆ, ಮನೆಯ ರೂಮ್ ನಲ್ಲಿದ್ದ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತ ಸುಟ್ಟು ಹೋಗಿದ್ದಾರೆ.

ಕೇರಳದ ಕೊಚ್ಚಿ ಮೂಲದ ಮ್ಯಾಥ್ಯೂಸ್ ವರ್ಗೀಸ್ ಮುಳಕಲ್ (40), ಪತ್ನಿ ಲಿನಿ ಅಬ್ರಹಾಂ (35), ಮಕ್ಕಳಾದ ಐರಿನ್ (14) ಹಾಗೂ ಇಸಾಕ್ (9) ಮೃತ ದುರ್ದೈವಿಗಳು. ಕಳೆದ 15 ವರ್ಷಗಳಿಂದ ಕುಟುಂಬ ಕುವೈತ್ ನಲ್ಲಿ ವಾಸವಾಗಿತ್ತು. ಇದೀಗ ಮನೆಯಲ್ಲಿಯೇ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಡೀ ಕುಟುಂಬವೇ ಸಾವನ್ನಪ್ಪಿದೆ.


Related Articles

Back to top button