ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಗೆ ತಾಂತ್ರಿಕ ತಕರಾರು ಎತ್ತಿದ ಕೆಲವರು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಸದರಿ ತಡೆಯಾಜ್ಞೆಯನ್ನು ತೆರವುಗೊಳಿಸಿ ನ್ಯಾಯಾಲಯವು ಸೋಮವಾರ ಆದೇಶ ಹೊರಡಿಸಿರುವುದರಿಂದ, ಚುನಾವಣೆಯಲ್ಲಿ ಗೆದ್ದಿರುವ ಎಲ್ಲ ಅಭ್ಯರ್ಥಿಗಳ ಆಯ್ಕೆ ಊರ್ಜಿತಗೊಂಡಿದೆ.
KUWJ ಚುನಾವಣೆ ಬಗ್ಗೆ ಸಲ್ಲಿಸಿದ್ದ ತಕರಾರು ಅರ್ಜಿ ವಜಾ ಮಾಡಿದ ಹೈಕೋರ್ಟ್
ನ್ಯಾಯಾಲಯದ ತಡೆಯಾಜ್ಞೆಯ ಕಾರಣ ಚುನಾವಣಾ ಫಲಿತಾಂಶದ ಘೋಷಣೆಗೆ ಅಡ್ಡಿಯಾಗಿತ್ತು. ನ್ಯಾಯಾಲಯದ ಆದೇಶದ ಬಳಿಕ ಈ ಕುರಿತಾದ ಅಡೆತಡೆ ನಿವಾರಣೆಯಾದಂತಾಗಿದೆ.
ಇಂದು ಸಂಜೆ ಇಲ್ಲಿಯ ಸದಾಶಿವನಗರದಲ್ಲಿನ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜಾರಿ ಅವರು ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಸಂಘದ ಬೆಳಗಾವಿ ಜಿಲ್ಲಾ ಘಟಕದ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು, ಅವರ ಹೆಸರುಗಳು ಹೀಗಿವೆ :-
ಅಧ್ಯಕ್ಷರು – ದಿಲೀಪ ಕುರಂದವಾಡೆ, ಗೌರವಾಧ್ಯಕ್ಷರು – ಭೀಮಶಿ ಜಾರಕಿಹೊಳಿ, ಉಪಾಧ್ಯಕ್ಷರು – ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ ಮತ್ತು ಶ್ರೀಶೈಲ ಮಠದ, ಪ್ರಧಾನ ಕಾರ್ಯದರ್ಶಿ- ಅರುಣ ಪಾಟೀಲ, ಕಾರ್ಯದರ್ಶಿಗಳು – ಶ್ರೀಕಾಂತ ಕುಬಕಡ್ಡಿ, ಈಶ್ವರ ಹೋಟಿ ಮತ್ತು ತಾನಾಜಿರಾವ್ ಮುರಂಕರ, ಖಜಾಂಚಿ – ಚೇತನ ಹೊಳೆಪ್ಪಗೋಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು – ಮಲ್ಲಿಕಾರ್ಜುನ ಗೊಂದಿ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು- ಬಸವರಾಜ ಹೊಂಗಲ, ಸಂಜೀವಕುಮಾರ ತಿಲಗರ, ಸುನೀಲ ಗಾವಡೆ, ಸುರೇಶ ಬಾಳೋಜಿ, ರಾಜೇಂದ್ರ ಕೋಳಿ, ರವಿ ಹುಲಕುಂದ, ಸುಕುಮಾರ ಬನ್ನೂರೆ, ಸಿದ್ದಲಿಂಗಯ್ಯ ಪೂಜೇರ, ಸೂರ್ಯಕಾಂತ ಪಾಟೀಲ, ರಾಜಕುಮಾರ ಬಾಗಲಕೋಟ, ಈರನಗೌಡ ಪಾಟೀಲ, ವಿಕ್ರಮ ಪೂಜೇರಿ, ಭೀಮಪ್ಪ ಕಿಚಡಿ, ಲೀನಾ ಟೋಪಣ್ಣವರ ಮತ್ತು ಈರಣ್ಣ ಬುಡ್ಡಾಗೋಳ.
ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜಾರಿ ಅವರು ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕುರಂದವಾಡೆ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸುತ್ತಿರುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ