Kannada NewsKarnataka News

ಮನೆ ತೊರೆದು ಬಂದ ಸಂತ್ರಸ್ತರಿಗೆ ಸ್ಥಳೀಯರ ನೆರವು

ಮನೆ ತೊರೆದು ಬಂದ ಸಂತ್ರಸ್ತರಿಗೆ ಸ್ಥಳೀಯರ ನೆರವು

ಪ್ರಗತಿವಾಹಿನಿ ಸುದ್ದಿ, ಹಳ್ಳೂರ-

ಘಟಪ್ರಭಾ ನದಿಯಿಂದ ಉಂಟಾದ ನೆರೆ ಪರಿಸ್ಥಿತಿಗೆ ಕಂಗಾಲಾಗಿ ಮನೆ ತೊರೆದು ಬಂದ ಸಂತ್ರಸ್ತರಿಗೆ ಮುನ್ಯಾಳ ಗ್ರಾಮದ ಸುತ್ತಮುತ್ತಲಿನ ಜನರು ನೆರವು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಮುನ್ಯಾಳ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ನೆರೆಹಾವಳಿಗೆ ತುತ್ತಾಗಿ ಮನೆ ಬಿಟ್ಟು ಬಂದಿರುವ ಸಂತ್ರಸ್ತರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುನ್ಯಾಳ ಗಂಜಿ ಕೇಂದ್ರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡೋಣಿ ತೋಟದಲ್ಲಿ ಆಶ್ರಯ ಪಡೆದಿದ್ದಾರೆ.

ಅವರಿಗೆ ಊಟದ ವ್ಯವಸ್ಥೆ, ಜಾನುವಾರಗಳಿಗೆ ಸರಕಾರದಿಂದ ಮೇವಿನ ವ್ಯವಸ್ಥೆ ಮಾಡಲಾಗಿದೆ. ಸಂಜು ಪಾರ್ಶಿ, ಸುಭಾಸ ಇವರಿಂದ ಪಲಾವ್, ಸಮೀರವಾಡಿಯ ಸಕ್ಕರೆ ಕಾರ್ಖಾನೆಯ ಗೊಡಾವಣ ಸಿಬ್ಬಂದಿ ವರ್ಗ ಹಾಗೂ ಹಮಾಲರಿಂದ ಚುನುಮರಿ, ಪಾರ್ಲೆ, ಕೊಬ್ಬರಿ ಎಣ್ಣೆ, ಸಾಬುನು, ಮೂಡಲಗಿ ಪೇಸ್ ಬುಕ್ ಗೆಳೆಯರ ಬಳಗದಿಂದ ಶಿರಾ-ಉಪ್ಪಿಟ್, ಮಹಾಲಿಂಗಪೂರ ಅಕ್ಕನ ಬಳಗದಿಂದ ಚುನುಮರಿ, ಪಾರ್ಲೆ, ಶೇಂಗಾ ಹಾಗೂ ಹಳ್ಳೂರ ಪುಣ್ಯಕೊಟಿ ಕಬಡ್ಡಿ ತಂಡದಿಂದ ಪಲಾವ್ ಉಪ್ಪಿಟ್, ಉಪ್ಪಿನ ಕಾಯಿ, ಮೂಡಲಗಿ ಕೊ ಆಪರೆಟಿವ್ ಬ್ಯಾಂಕಿನಿಂದ ಜಮಖಾನ್, ಟಾವೇಲ್ ಸಂತ್ರಸ್ತರಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ.

ರಾಜ್ಯ ಸರ್ಕಾರದಿಂದ ದನಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ.  ಸಂತ್ರಸ್ತರಿಗೆ ದಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಂತ್ರಸ್ತರು ನೆರೆಹಾವಳಿಗೆ ತುತ್ತಾಗಿರುವವರು ಮಾತ್ರ ಗಂಜಿ ಕೇಂದ್ರದಲ್ಲಿ ಊಟ ಮತ್ತು ದನಗಳಿಗೆ ಮೇವಿನ ವ್ಯವಸ್ಥೆಯನ್ನು ಪಡೆದುಕೊಳ್ಳಬೇಕು. ಘಟಪ್ರಭಾ ನದಿಯ ನೀರಿನ ಮಟ್ಟವು ಇಳಿಮುಖವಾಗುತ್ತಿದೆ.  ವರುಣ ಆರ್ಭಟವು ಕೂಡಾ ಕಡಿಮೆ ಆಗಿದೆ.

ಗಂಜಿ ಕೇಂದ್ರದಲ್ಲಿ ವಿಸ್ತರಣಾಧಿಕಾರಿಗಳು ಆರ್ ಕೆ ಬಿಸಿರೊಟ್ಟಿ, ಭೀಮಶಿ ಮಗದುಮ್ಮ, ಹಣಮಂತ ತೆರದಾಳ, ಸಿ ಪಿ ಆಯ್ ವೆಂಕಟೇಶ ಮುರನಾಳ, ಆನಂದರಾವ ನಾಯ್ಕ, ಗೊವೀಂದಪ್ಪ ಒಂಟಗೋಡಿ, ಚಂದ್ರಶೇಖರ ಹುಕ್ಕೆರಿ, ಮಲ್ಲಪ್ಪ ಮದಿಹಳ್ಳಿ, ಪಿ ಡಿ ಒ ಎಸ್ ಎಸ್ ರೊಡ್ಡನ್ನವರ, ವೀಣಾ ಕನಕರಡ್ಡಿ, ಮಹೇಶ ಹಳ್ಳೂರ, ಮುರಿಗೆಪ್ಪ ಮಾಲಗಾರ, ಹಣಮಂತ ದುರದುಂಡಿ, ಸುರೇಶ ಮರಿಚಂಡಿ, ಮುನ್ಯಾಳ ಗ್ರಾಮಸ್ಥರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button