Kannada NewsKarnataka NewsLatest

*ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ; ಶಾಸಕಿ ಜಾಗದಲ್ಲಿ ಕುಳಿತಿದ್ದ ಅನಾಮಧೇಯ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಜೆಟ್ ಮಂದನೆಯ ವೇಳೆ ಅನಾಮಧೇಯ ವ್ಯಕ್ತಿಯೊಬ್ಬರು ವಿಧಾನಸಭೆಗೆ ಎಂಟ್ರಿಯಾಗಿರುವ ಘಟನೆ ನಡೆದಿದೆ.

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ಅನಾಮಧೇಯ ವ್ಯಕ್ತಿ ವಿಧಾನಸಭೆಯೊಳಗೆ ಪ್ರವೇಶಿಸಿ ದೇವದುರ್ಗ ಶಾಸಕಿ ಕರೆಮ್ಮ ಅವರ ಜಾಗದಲ್ಲಿ ಕುಳಿತಿದ್ದರು. ಸುಮಾರು 15 ನಿಮಿಷಗಳ ಕಾಲ ಸದನದ ಒಳಗೆ ಕುಳಿತಿದ್ದು, ಅನುಮಾನಗೊಂಡ ಶಾಸಕ ಶರಣಗೌಡ ಕಂದಕೂರು ಅವರು ಸ್ಪೀಕರ್ ಗಮನಕ್ಕೆ ತರುತ್ತಿದ್ದಂತೆ ವ್ಯಕ್ತಿ ನಾಪತ್ತೆಯಾಗಿದ್ದಾನೆ.

ಬಜೆಟ್ ಮಂಡನೆ ವೇಳೆ ವಿಧಾನಸಭೆಯಲ್ಲಿಯೇ ಭದ್ರತಾ ಲೋಪವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಶಾಸಕ ಶರಣಗೌಡ ಕಂದಕೂರು ಹೇಳುವ ಪ್ರಕಾರ ಆತ ಅನಾಮಧೇಯ ವ್ಯಕ್ತಿ. ಯಾರೆಂದು ಅವರನ್ನು ಪ್ರಶ್ನಿಸಿದಾಗ ತಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿದ್ದಾರೆ. ಆದರೆ ಆತ ಮೊಳಕಾಲ್ಮೂರು ಶಾಸಕರಲ್ಲ, ನಾನು ಜಿ.ಟಿ.ದೇವೇಗೌಡ ಹಾಗೂ ಇನ್ನಿತರನ್ನು ಕೇಳಿದಾಗಲು ಅವರು ಯಾರೆಂದು ಗೊತ್ತಿಲ್ಲ ಎಂದಿದ್ದಾರೆ. ಶಾಸಕರಲ್ಲದ, ಒಬ್ಬ ಖಾಸಗಿ ವ್ಯಕ್ತಿ ಸದನದ ಆಸನದಲ್ಲಿ ಬಂದು ಕುಳಿತುಕೊಳ್ಳುವಷ್ಟರ ಮಟ್ಟಿಗೆ ವಿಧಾನಸಭೆಯಲ್ಲಿ ಭದ್ರತಾ ಲೋಪವುಂಟಾಗಿದೆ ಎಂದರೆ ಅಚ್ಚರಿ ಎನಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಆತ ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button