Kannada News

ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ನೀಡಿದರೆ ಬಿಜೆಪಿಯನ್ನು ನೀರಿನಲ್ಲಿ ಮುಳುಗಿಸುತ್ತಾರೆ ಎಂದ ಸಹೋದರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಶಾಸಕ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ಇಲ್ಲ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ನಿರಾವರಿ ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಹೋದರ ಲಖನ್ ಜಾರಕಿಹೊಳಿ, ರಮೇಶ್ ಗೆ ಜಲಸಂಪನ್ಮೂಲ ನೀಡಿದರೆ ಬಿಜೆಪಿಯನ್ನೇ ನೀರಿನಲ್ಲಿ ಮುಳುಗಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿ, ಯಾವುದೇ ಹೊಸ ಡಿಸಿಎಂ ಸ್ಥಾನಗಳಿಲ್ಲ ಎಂಬುದನ್ನು ಖಚಿತಪಡಿಸಿದ್ದರು.

ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಲಖನ್, ಉಪಚುನಾವಣೆಗೆ ಮುನ್ನವೇ ನಾವು ರಮೇಶ್​ ಜಾರಕಿಹೊಳಿಗೆ ಯಾವುದೇ ಸಚಿವ ಸ್ಥಾನವು ಸಿಗುವುದಿಲ್ಲ. ಅವರು ಡಿಸಿಎಂ ಕೂಡ ಆಗುವುದಿಲ್ಲ ಎಂದು ಹೇಳಿದ್ದೆವು. ಅವರಿಗೆ ಸ್ಥಾನ ಸಿಗದಿರುವುದರ ಹಿಂದೆ ಮುಖ್ಯಮಂತ್ರಿ, ಬಿಜೆಪಿ ಮುಖಂಡರ ಯಾವುದೇ ತಪ್ಪು ಕೂಡ ಇಲ್ಲ ಎಂದರು.

Home add -Advt

ಒಂದು ವೇಳೆ ರಮೇಶ್​ ಜಾರಕಿಹೊಳಿಗೆ ನೀರಾವರಿ ಖಾತೆ ನೀಡಿದರೆ ಬಿಜೆಪಿಯನ್ನು ಮುಳುಗಿಸುತ್ತಾರೆ. ಅವರಿಗೆ ಸಣ್ಣ ಕೈಗಾರಿಕೆ ಅಥವಾ ಪೌರಾಡಳಿತ ಖಾತೆ ಕೊಟ್ಟರೆ ಮಾತ್ರ ಬಿಜೆಪಿ ಸರ್ಕಾರ ಸುರಕ್ಷಿತವಾಗಲಿದೆ ಎಂದು ಹೇಳಿದ್ದಾರೆ.

Related Articles

Back to top button