Latest

ರೈತರ ಮೇಲೆ ಹರಿದ ಎರಡು ಕಾರು; ಭೀಕರ ದೃಶ್ಯದ ವಿಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ; ಲಖನೌ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರಕ್ಕೆ ಕಾರಣವಾದ ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈತರ ಮೇಲೆ ಎರಡು ವಾಹನಗಳು ಹರಿದ ದೃಶ್ಯ ಭಯಂಕರವಾಗಿದ್ದು, ಭಯ ಹುಟ್ಟಿಸುವಂತಿದೆ.

ಲಖಿಂಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಬೆಂಗಾವಲು ವಾಹನ ಹಾಗೂ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಅವರ ಕಾರು ಹರಿದ ಪರಿಣಾಮ ಇಬ್ಬರು ರೈತರು ಸಾವನ್ನಪ್ಪಿದ್ದರು. ಘಟನೆ ಬೆನ್ನಲ್ಲೇ ನಡೆದ ಹಿಂಸಾಚಾರ ಪ್ರಕರಣದಲ್ಲಿ 8 ಜನರು ಮೃತಪಟ್ಟಿದ್ದರು. ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣ ಮುಂದುವರೆದಿದೆ.

ಈ ಮಧ್ಯೆ ಪ್ರತಿಭಟನಾ ನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಹಿರಂಗವಾಗಿದೆ. ವಿಡಿಯೋ ಭಯ ಹುಟ್ಟಿಸುವಂತಿದ್ದು, ವೇಗವಾಗಿ ಬಂದ ಒಂದು ಜೀಪ್ ಹಾಗೂ ಒಂದು ಕಾರು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆಯೇ ಹರಿದಿದೆ.

ಇನ್ನು, ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರು ಗೆಸ್ಟ್ ಹೌಸ್ ನಲ್ಲಿ ಗೃಹ ಬಂಧನದಲ್ಲಿರಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಪ್ರಿಯಾಂಕಾ ಗಾಂಧಿ, ರೈತರ ಮೇಲೆ ಹರಿದ ಕಾರಿನ ವಿಡಿಯೋವನ್ನು ಪ್ರಧಾನಿ ಮೋದಿಯವರಿಗೆ ಟ್ಯಾಗ್ ಮಾಡಿ, ನಿಮ್ಮ ಸರ್ಕಾರ ನನ್ನನ್ನು ಕಳೆದ 28 ಗಂಟೆಯಿಂದ ಯಾವುದೇ ಆದೇಶ, ಎಫ್ ಐ ಆರ್ ಇಲ್ಲದೇ ಕಸ್ಟಡಿಯಲ್ಲಿಟ್ಟಿದೆ. ಆದರೆ ರೈತರನ್ನು ತುಳಿದ ಈ ವ್ಯಕ್ತಿಯನ್ನು ಯಾಕಿನ್ನೂ ಬಂಧಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಮತ್ತೊಂದು ದುರಂತ; ವಿಷಾಹಾರಕ್ಕೆ ತಾಯಿ-ಮಗ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button