*ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾರ ಪಾಲಾಗುತ್ತದೆ? ಪತ್ತೆಯಾದ ಚಿನ್ನಾಭರಣಗಳು ಯಾವುದು?*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಸಿಕ್ಕ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿತ್ತು. ಸಿಕಿರುವ ನಿಧಿ ಬಗ್ಗೆ ಹಾಗೂ ಅದರಲ್ಲಿರುವ ಚಿನ್ನಾಭರಣಗಳಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ನಿಜಕ್ಕು ಸಿಕ್ಕಿರುವ ನಿಧಿ ಯಾವುದು? ಸಿಕ್ಕ ನಿಧಿ ಯಾರ ಪಾಲಾಗುತ್ತದೆ ಎಂಬ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಲಕ್ಕುಂಡಿಯಲ್ಲಿ ಸಿಕ್ಕಿರುವ ನಿಧಿ ಕುರುತು ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸ ಮಾಡುವಾಗ ತಮ್ಬಿಗೆಯೊಂದರಲ್ಲಿ ನಿಧಿ ಪತ್ತೆಯಾಗಿದ್ದು, ಅದರಲ್ಲಿ ಚಿನ್ನಾಭರಣಗಳು ಸೇರಿ ಹಲವು ವಸ್ತುಗಳು ಇವೆ. ಅವುಗಳ ವಿವರ ಹೀಗಿದೆ.
ಕೈ ಕಡಗದ 1 ತುಂಡು – 33 ಗ್ರಾಂ
ಕೈ ಕಡಗದ 1 ತುಂಡು – 12 ಗ್ರಾಂ
ಕಂಠದ ಹಾರ 1 ತುಂಡು – 44 ಗ್ರಾಂ
ಕಂಠದ ಹಾರ 1 ತುಂಡು – 137 ಗ್ರಾಂ
ಕುತ್ತಿಗೆ ಚೈನ್ 1 ತುಂಡು – 49 ಗ್ರಾಂ
5 ದೊಡ್ಡ ಗುಂಡಿನ 1 ತೋಡೆ ತುಂಡು – 34 ಗ್ರಾಂ
2 ದೊಡ್ಡ ಗುಂಡಿನ 1 ತೋಡೆ ತುಂಡು – 17 ಗ್ರಾಂ
1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
1 ವಂಕಿ ಉಂಗುರ – 23 ಗ್ರಾಂ
ಕಿವಿ ಹ್ಯಾಂಗಿಂಗ್ 1 ತುಂಡು – 03 ಗ್ರಾಂ
1 ನಾಗ ರೂಪದ ಕಿವಿಯೋಲೆ ಬಿಳಿ ಮಣಿ ಸಹಿತ – 07 ಗ್ರಾಂ
1 ನಾಗ ರೂಪದ ಕಿವಿಯೋಲೆ ಕೆಂಪು ಮಣಿ ಸಹಿತ – 07 ಗ್ರಾಂ
1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
1 ಕೇಸರಿ ಹವಳದ ಓಲೆ – 05 ಗ್ರಾಂ
1 ಉಂಗುರ – 08 ಗ್ರಾಂ
1 ಬಿಳಿ ಹರಳು, 1 ಕೆಂಪು ಹರಳು , 1 ಹಸಿರು ಹರಳು ಅಂಗಿ ಗುಂಡಿ ಮತ್ತು 1 ತುಂಡು ಗೆಜ್ಜೆ ಎಲ್ಲ ಸೇರಿ:- 4 ಗ್ರಾಂ
2 ಕಡ್ಡಿಗಳು – 03 ಗ್ರಾಂ
22 ತೂತು ಬಿಲ್ಲೆಗಳು – 48 ಗ್ರಾಂ
ಒಟ್ಟು ಚಿನ್ನ : 466 ಗ್ರಾಂ
ಚಿನ್ನಾಭರಣ ಮಾತ್ರವಲ್ಲದೆ ತಾಮ್ರದ ಶಿಥಿಲಗೊಂಡ 1 ಮಡಿಕೆ, 1 ಮುಚ್ಚಳ ಹಾಗೂ 3 ಸಣ್ಣ ತುಂಡು ಸಹಿತ 634 ಗ್ರಾಂ ತಾಮ್ರದ ತೆಂಬಿಗೆ ಕೂಡ ಸಿಕ್ಕಿದೆ.
ಈ ನಿಧಿಯ ಬಗ್ಗೆ ಇನ್ನಷ್ಟು ತನಿಖೆಯಾಗಬೇಕಿದೆ. ತನಿಖೆಯಾಗುವವರೆಗೂ ನಿಧಿ ಜಿಲ್ಲಾ ಖಜಾನೆಯಲ್ಲಿರುತ್ತದೆ. ಬಳಿಕ ನಿಧಿ ರಾಜ್ಯ ಖಜಾನೆಗೆ ಹೋಗುತ್ತದೆ.ಆ ನಂತರದಲ್ಲಿ ಪುರಾತತ್ವ ಇಲಾಖೆಯಿಂದ ವಸ್ತುಗಳ ಸಂಗ್ರಹಾಲಯದಲ್ಲಿ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ನಿಧಿ ಸಿಕ್ಕ ಜಾಗದಲ್ಲಿ ಇತಿಹಾಸ ತಜ್ಞರು ಪರಿಶೀಲಿಸುತ್ತಾರೆ, ಯಾವುದೇ ವಸ್ತುಗಳು ಇಲ್ಲಿ ಮತ್ತೆ ಪತ್ತೆಯಾಗದಿದ್ದರೆ ಕುಟುಂಬದವರಿಗೆ ಮನೆ ಕಟ್ಟಲು ಅವಕಾಶ ಕೊಡಲಾಗುತ್ತದೆ. ಎಂಟು ದಿನಗಳಲ್ಲಿ ಪ್ರಕ್ರಿಯೆ ನಡೆಯಲಿದೆ. ಎಲ್ಲವೂ ಕಾನೂನು ಪ್ರಕಾರವಾಗಿಯೆ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ ಎಂದು ತಿಳಿಸಿದರು.



