Kannada NewsKarnataka NewsLatest

ಸಂತೋಷ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಲಕ್ಷ್ಮೀ ಹೆಬ್ಬಾಳಕರ್; ಮನಕಲುಕುವಂತಿತ್ತು ಹೆಬ್ಬಾಳಕರ್ ಮಡಿಲಲ್ಲಿ ಮುಗ್ದ ಮಗುವಿನ ಆಟ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ – 

ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬೆಳಗಾವಿಯ ಸಮರ್ಥ ಕಾಲೋನಿಯಲ್ಲಿರುವ ಸಂತೋಷ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂತೋಷ್ ಪತ್ನಿ ಜಯಶ್ರೀ ಅವರಿಗೆ ಧೈರ್ಯ ಹೇಳಿದರು.

Home add -Advt

ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ನಿನ್ನ ಮಗನ ಭವಿಷ್ಯದ ಸಲುವಾಗಿ ಧೈರ್ಯದಿಂದ ಹೋರಾಟ ಮಾಡಬೇಕು ಎಂದು ಧೈರ್ಯ ತುಂಬಿದರು.

ಸಂತೋಷ ಅವರ ಒಂದು ವರ್ಷದ ಮುಗ್ದ ಮಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಮಡಿಲಲ್ಲಿ ಆಟವಾಡುವ ದೃಶ್ಯ ಮನಕಲಕುವಂತಿತ್ತು.

ಸಂತೋಷ್ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈಶ್ವರಪ್ಪ ಬಂಧಿಸಿ, ಸಮಗ್ರ ತನಿಖೆ ನಡೆಸಿ – ಬಿಜೆಪಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್; ಹೆಬ್ಬಾಳಕರ್, ಹಟ್ಟಿಹೊಳಿ ನೇತೃತ್ವ

Related Articles

Back to top button