Kannada NewsKarnataka NewsLatest

ಲಕ್ಷ್ಮಿ ದೇವಿ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್   

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ​  ಬೆಳಗಾವಿ ಗ್ರಾಮೀಣ​ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಿ ಮಂದಿರದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ​ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ನೆರವೇರಿಸಿದರು.
​ ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದೆಂದೂ ಕಾಣದಷ್ಟು ಅಭಿವೃದ್ಧಿಯನ್ನು ಕಾಣುತ್ತಿದ್ದರೂ ಪ್ರವಾಹದಂತಹ ಪ್ರಕೃತಿ ವಿಕೋಪದಿಂದಾಗಿ ಸಮಸ್ಯೆಯಾಗುತ್ತಿದೆ. ಆದರೆ ಇದಕ್ಕೆ ಧೈರ್ಯಗುಂದದೆ ನಾವು ನೀವೆಲ್ಲ ಸೇರಿ ಕ್ಷೇತ್ರವನ್ನು ಮಾದರಿಯಾಗಿಸುವತ್ತ ಮುನ್ನಡೆಯೋಣ. ಕ್ಷೇತ್ರದ ಪ್ರತಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ, ದೇವಸ್ಥಾನ ಜೀರ್ಣೋದ್ಧಾರದಂತಹ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ನಮ್ಮನ್ನು ಪ್ರವಾಹ, ಕೊರೋನಾದಂತಹ ಸಂಕಷ್ಟದಿಂದ ಪಾರು ಮಾಡು ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ​ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಸಜ್ಜನರು. ಇಂತಹ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ದೇ ನನ್ನ ಪೂರ್ವಜನ್ಮದ ಪುಣ್ಯ. ​ನಿಮ್ಮ ಪ್ರೀತಿ, ವಿಶ್ವಾಸ, ಆಶಿರ್ವಾದಗಳಿಂದಾಗಿ ನಾನು ಎಂತಹ ಸಂಕಷ್ಟಗಳಿಗೂ ಎದೆಗುಂದದೆ ಕೆಲಸ ಮಾಡಲು ಸಾಧ್ಯವಾಗಿದೆ. ಇದೇ ರೀತಿಯ ಪ್ರೋತ್ಸಾಹ ಸದಾ ಇರಲಿ ಎಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಗೀತಾ ಹಿರೇಮಠ, ಉಪಾಧ್ಯಕ್ಷರಾದ ಬಸವಂತ ನಾಯ್ಕ, ಸದಸ್ಯರುಗಳಾದ ಸಿದ್ದಪ್ಪ ಚಾಪಗಾಂವ, ವಿಠ್ಠಲ ಅರ್ಜುನವಾಡಿ, ಪಿಕೆಪಿಎಸ್ ಅಧ್ಯಕ್ಷರಾದ ಮುಶೆಪ್ಪ ಹಟ್ಟಿ, ಪಡೆಪ್ಪ ಅರಳಿಕಟ್ಟಿ, ರಾಮನಗೌಡ ಪಾಟೀಲ, ಯಲಗೌಡ ಪಾಟೀಲ, ಶಂಕರ ಚಾಪಗಾಂವ, ಮಂಜುನಾಥ, ಅಕ್ಕನ್ನವರ, ರಾಮು ಪಾಟೀಲ, ಯಲ್ಲಪ್ಪ ಮರ್ಚನ್ನವರ, ಸೋಮಪ್ಪ ತೋಲಗಿ, ಶಾವಂತ ಜಕಾತಿ, ಪಕ್ಷದ ಕಾರ್ಯಕರ್ತರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
​ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಸಜ್ಜನರು. ಇಂತಹ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ದೇ ನನ್ನ ಪೂರ್ವಜನ್ಮದ ಪುಣ್ಯ. ​ನಿಮ್ಮ ಪ್ರೀತಿ, ವಿಶ್ವಾಸ, ಆಶಿರ್ವಾದಗಳಿಂದಾಗಿ ನಾನು ಎಂತಹ ಸಂಕಷ್ಟಗಳಿಗೂ ಎದೆಗುಂದದೆ ಕೆಲಸ ಮಾಡಲು ಸಾಧ್ಯವಾಗಿದೆ. ಇದೇ ರೀತಿಯ ಪ್ರೋತ್ಸಾಹ ಸದಾ ಇರಲಿ
-ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button