Karnataka News

*ಶಾಲಾ ಬಸ್ ಡಿಕ್ಕಿ: ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಕಡಿಮೆಯೇ. ಪುಟ್ಟ ಬಾಲಕಿ ಮೇಲೆ ಶಾಲಾ ಬಸ್ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ಮೂರು ವರ್ಷದ ಖುಷಿ ಬನ್ನಟ್ಟಿ ಮೃತ ಬಾಲಕಿ. ರಾಜಶೇಖರ್ ಎಂಬುವವರ ಪುತ್ರಿ. ಶಾಲೆಯ ಬಸ್ ನಲ್ಲಿ ಅಣ್ಣ ಬಂದಿದ್ದಾನೆ ಎಂದು ಆತನನ್ನು ಕರೆಯಲೆಂದು ಬಾಲಕಿ ತನ್ನ ತಂದೆಯ ಹಿಂದೆ ಹೋಗಿದ್ದಾಳೆ. ಆದರೆ ತಂದೆ ತನ್ನ ಹಿಂದೆ ಮಗು ಬಂದಿರುವುದನ್ನು ಗಮನಿಸಿಲ್ಲ. ಸ್

ಶಾಲೆ ಬಸ್ ಪಕ್ಕದಲ್ಲಿಯೇ ಮಗು ನಿಂತಿದೆ. ಶಾಲಾ ಬಸ್ ಚಾಲಕ ಕೂಡ ಗಮನಿಸದೇ ಬಸ್ ಹಿಂತೆಗೆದುಕೊಂಡಿದ್ದಾನೆ. ಬಾಲಕಿ ಬಸ್ ನ ಅಡಿ ಸಿಲುಕಿದ್ದಾಳೆ. ಬಸ್ ಚಕ್ರ ಬಾಲಕಿಯ ತಲೆ ಮೇಲೆ ಹರಿದು ಹೋಗಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅಪಘಾತದ ಬಳಿಕ ಬಸ್ ಚಾಲಕ ಶ್ರೀಶೈಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅಫಜಲಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt


Related Articles

Back to top button