
ರೈತನ ಮಗಳಾಗಿ ರೈತರ ಸಂಕಟ ಗೊತ್ತು, ಧೃತಿಗೆಡಬೇಡಿ ನಾನಿದ್ದೇನೆ ಎಂದ ಶಾಸಕಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿಯ ರೈತ ಸೇವಾ ಸಹಕಾರಿ ಕೇಂದ್ರದಲ್ಲಿ ರೈತರಿಗೆ ಸೋಯಾಬೀನ್ ಬೀಜಗಳನ್ನು ವಿತರಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಧೃತಿಗೆಡದೆ ಕೃಷಿ ಕಾರ್ಯ ಮುನ್ನಡೆಸಿ ಎಂದು ಹುರುದುಂಬಿಸಿದರು.
.

ನಾನು ಕೂಡ ಒಬ್ಬ ರೈತನ ಮಗಳಾಗಿ ರೈತರ ಕಷ್ಟಗಳ ಬಗ್ಗೆ ಅರಿತಿದ್ದೇನೆ. ನನ್ನ ತಂದೆ ಹಲವಾರು ಸಂದರ್ಭಗಳಲ್ಲಿ ಸಂಕಟಪಡುವುದನ್ನು ನೋಡಿದ್ದೇನೆ. ನಿಮಗೆ ಯಾವುದೇ ತರಹದ ತೊಂದರೆಗಳಾದರೆ ನಾನಿದ್ದೇನೆ. ನಿಮ್ಮ ಕಷ್ಟಗಳಿಗೆ ಸದಾಕಾಲವೂ ಸ್ಪಂದಿಸುತ್ತೇನೆ. ಯಾವೊಬ್ಬ ರೈತ ಕೂಡ ಚಿಂತಿಸುವುದುಬೇಡ. ಈಗಾಗಲೇ ನಿಮ್ಮ ಕಷ್ಟಗಳಲ್ಲಿ ಭಾಗಿಯಾಗಿ ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಿನ ಅನುಕೂಲಕ್ಕೋಸ್ಕರ ಕೆರೆ ತುಂಬಿಸುವ ಯೋಜನೆ ತಂದಿದ್ದೇನೆ. ಇನ್ನೂ ಕೆಲವು ಯೋಜನೆಯನ್ನು ರೂಪಿಸಿದ್ದೇನೆ ಎಂದು ಹೆಬ್ಬಾಳಕರಿ ತಿಳಿಸಿದರು.
ನಿಮ್ಮ ಎಲ್ಲ ಬೇಡಿಕೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನ್ಯಾಯ ಒದಗಿಸಿ ಕೊಡುವ ಕೆಲಸವನ್ನು ಮಾಡಿ ಕೊಡುವ ಜವಾಬ್ದಾರಿ ನನ್ನದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರು, ಕೃಷಿ ಇಲಾಖೆಯ ಅಧಿಕಾರಿ ಶಂಕರ, ಗಣಾಚಾರಿ, ಸಿ ಸಿ ಪಾಟೀಲ, ಅಡಿವೇಶ ಇಟಗಿ, ಸುರೇಶ ಇಟಗಿ, ಗೌಸ್ ಜಾಲಿಕೊಪ್ಪ, ಶ್ರೀಕಾಂತ್ ಮದುಭರಮಣ್ಣವರ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ