Latest

ವಿವಾಧವೆಬ್ಬಿಸಿದ ಶಶಿ ತರೂರ್-ಸುಪ್ರಿಯಾ ಸುಳೆ ಪಿಸು ಮಾತು

ಪ್ರಗತಿ ವಾಹಿನಿ ಸುದ್ದಿ ನವದೆಹಲಿ

ಸಂಸತ್‌ನಲ್ಲಿ ಫಾರೂಕ್ ಅಬ್ದುಲ್ ಅವರು ಗಂಭೀರವಾಗಿ ಮಾತನಾಡುತ್ತಿರುವಾಗ ಹಿಂಬದಿಯಲ್ಲಿ ಕುಳಿತಿದ್ದ ಸಂಸದರಾದ ಸುಪ್ರಿಯಾ ಸುಳೆ ಮತ್ತು ಶಶಿ ತರೂರ್ ಅವರು ಗುಸುಗುಸು ಮಾತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಭಾರೀ ವಿವಾಧಕ್ಕೂ ಕಾರಣವಾಗಿದೆ.

ಒಬ್ಬ ಸಂಸದ ಗಂಭೀರ ವಿಷಯದ ಬಗ್ಗೆ ಮಾತಾಡುತ್ತಿರುವಾಗ ಜವಾಬ್ದಾರಿಯುತ ಸಂಸದರು ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲದೆ ಶಾಲಾ ಮಕ್ಕಳಂತೆ ಪಿಸು ಮಾತಾಡುತ್ತಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಶಶಿ ತರೂರ್, ಫಾರೂಕ್ ಅಬ್ದುಲ್ಲಾ ಅವರ ಮಾತಿಗೆ ತೊಂದರೆ ನೀಡುವ ಉದ್ದೇಶ ನಮಗಿಬ್ಬರಿಗೂ ಇರಲಿಲ್ಲ. ಫಾರುಕ್ ಅಬ್ದುಲ್ಲಾ ಬಳಿಕ ಸುಪ್ರಿಯಾ ಸುಳೆ ಅವರಿಗೆ ಸರಕಾರದ ಪಾಲಿಸಿಯೊಂದರ ಕುರಿತು ಮಾತನಾಡಬೇಕಿತ್ತು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಕೇಳಲು ಅವರು ನನ್ನತ್ತ ತಿರುಗಿದರು. ಅವರು ಮೆಲು ಧ್ವನಿಯಲ್ಲಿ ಮಾತಾಡಿದ್ದರಿಂದ ಸ್ಪಷ್ಟವಾಗಿ ಆಲಿಸಲು ನಾನೂ ಸಹ ಮುಂದೆ ಬಾಗಿದ್ದೆ ಎಂದು ವಿವರಿಸಿದ್ದಾರೆ.

 

ಮಹಾರಾಷ್ಟ್ರ: ಬಿಸಿಲಿನ ತಾಪಕ್ಕೆ 7 ಜನರ ಸಾವು: 59 ಜನರಿಗೆ ಸನ್ ಸ್ಟ್ರೋಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button